ಬಾವನಿಂದ ರೌಡಿ ಶೀಟರ್‌ಗೆ ಚೂರಿ ಇರಿತ : ಸಾವು

0
21
ಕೊಲೆ

ಮೂಡುಬಿದಿರೆ: ಬಾವ-ಬಾವನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದ ಮಾತಿನ ಚಕಮಕಿಯು ಚೂರಿಯಿಂದ ಇರಿದು ಕೊಲೆ ಮಾಡುವ ತನಕ ನಡೆದ ಘಟನೆಯು ಮೂಡುಬಿದಿರೆ ಠಾಣಾ ವ್ಯಾಪ್ತಿಯ ಗಂಟಾಲ್ ಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಗೋಕಳ್ಳತನ, ಆಕ್ರಮ ದನದ ಮಾಂಸ ಸಾಗಾಟ ಸಹಿತ ಇತರ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ಜಮಾಲುದ್ದೀನ್ (40ವ)ಕೊಲೆಯಾದ ವ್ಯಕ್ತಿ.
ಅವರ ಬಾವ ಚಿಕ್ಕಮಗಳೂರು ಮೂಲದ ಮುಹಮ್ಮದ್ ಸಾಹಿಬ್ ಕೊಲೆ ಆರೋಪಿ ಯಾಗಿದ್ದಾನೆ.
ಇಬ್ಬರ ಮನೆಯೂ ಅಕ್ಕಪಕ್ಕದಲ್ಲಿದ್ದು ಜಮಾಲುದ್ದೀನ್ ತನ್ನ ಅಕ್ಕನ ಮಗನಿಗೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಂಡಿದ್ದು ಈ ಬಗ್ಗೆ ಬಾವ ಸಾಹಿಬ್ ಮತ್ತು ಜಮಾಲುದ್ದೀನ್ ನಡುವೆ ಮಾತಿನ ಚಕಮಕಿ ನಡೆಯಿತೆನ್ನಲಾಗಿದೆ. ಕೋಪದ ಬರದಲ್ಲಿ ಅಲ್ಲೇ ಇದ್ದ ಚಾಕುವಿನಲ್ಲಿ ಸಾಹಿಬ್ ತನ್ನ ಪತ್ನಿಯ ಅಣ್ಣ ಜಮಾಲುದ್ದೀನ್ ಹೊಟ್ಟೆಗೆ ಇರಿದಿದ್ದು ತೀವ್ರವಾಗಿ ಗಾಯಗೊಂಡ ಜಮಾಲ್ ಕೊನೆಯುಸಿರೆಳೆದಿ ದ್ದಾರೆ. ಆರೋಪಿ ಸಾಹಿಬ್ ನನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Previous articleಅಭಿವೃದ್ಧಿಯ ವೇಗ ಹೆಚ್ಚಲಿದೆ
Next articleಹಾಡಹಗಲಲ್ಲೇ ಬಸ್​ ಚಾಲಕನ ಬರ್ಬರ ಹತ್ಯೆ