Home Advertisement
Home ತಾಜಾ ಸುದ್ದಿ ಬಾಬು ಜಗಜೀವನರಾಂ ಜಯಂತಿ : ಸರಕಾರಿ ಕಾರ್ಯಕ್ರಮಕ್ಕೆ ಸಮಾಜದ ಬಹಿಷ್ಕಾರ

ಬಾಬು ಜಗಜೀವನರಾಂ ಜಯಂತಿ : ಸರಕಾರಿ ಕಾರ್ಯಕ್ರಮಕ್ಕೆ ಸಮಾಜದ ಬಹಿಷ್ಕಾರ

0
145

ಇಳಕಲ್ : ಎಪ್ರಿಲ್ ೫ ರಂದು ನಡೆಯಲಿರುವ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಜಯಂತಿ ಯನ್ನು ಆಚರಿಸಲಿರುವ ಸರಕಾರಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುವದಾಗಿ‌ ಹೇಳಲಾಯಿತು.
ಜಯಂತಿ ಆಚರಣೆ ಅಂಗವಾಗಿ ತಹಸೀಲ್ದಾರ ಸತೀಶ ಕೂಡಲಗಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಾಜದ ಹಲವಾರು ಬಾಂಧವರು ಆಗಮಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದರೂ ಎಲ್ಲರ ಒಮ್ಮತದ ಅಭಿಪ್ರಾಯ ಬಹಿಷ್ಕಾರವೇ ಆಗಿತ್ತು. ಸಮಾಜದ ವತಿಯಿಂದ ಪ್ರತ್ಯೇಕವಾಗಿ ಜಯಂತಿಯನ್ನು ಆಚರಿಸಲು ರೂಪರೇಷೆ ಸಿದ್ದ ಮಾಡಲಾಗುತ್ತಿದೆ ಆದರೆ ಸಮಾಜದ ಯಾರೂ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸಿದ್ದಪ್ಪ ಮಾದರ ಸೇರಿದಂತೆ ಪ್ರಮುಖರು ಹೇಳಿದರು.
ಗ್ರೇಡ್‌ ಟು ತಹಸೀಲ್ದಾರ ಈಶ್ವರ ಗಡ್ಡಿ , ನಿವೃತ್ತ ಉಪನ್ಯಾಸಕ ಡಾ ಸೋಮಶೇಖರ್ ಹೊಸಮನಿ , ಶಾಂತಕುಮಾರ ಗೊರಬಾಳ, ಭರಮರೆಡ್ಡಿ ಚಿಂತಕಮಲದಿನ್ನಿ ಮತ್ತಿತರರು ಪಾಲ್ಗೊಂಡಿದ್ದರು. ಸರಕಾರ ಒಳ ಮೀಸಲಾತಿ ನೀಡುವವರೆಗೆ ಹೋರಾಟ ಹೀಗೆ ಮುಂದುವರೆಯುತ್ತದೆ ಎಂದು ಸಿದ್ದಪ್ಪ ಮಾದರ ಪತ್ರಿಕೆಗೆ ತಿಳಿಸಿದರು

Previous articleಆದೇಶದ ಹಿಂದಿನ ಕಾಣದ ಕೈಗಳು ಯಾವುವು?
Next articleಡಿಕೆಶಿ ಪ್ರತಿಕೃತಿ ದಹಿಸಿ ಆಕ್ರೋಶ