ಬಸವನಾಡು ಮಲೆನಾಡಿನ ಮುದವನ್ನು ನೀಡಲಿದೆ!

0
20

ಬರದನಾಡು ಈಗ ಮಲೆನಾಡು!

ಬೆಂಗಳೂರು: ನಮ್ಮ ಬಸವನಾಡು ಮತ್ತಷ್ಟು ಹಸಿರು ಸಿರಿ ಹೊದ್ದು, ಮಲೆನಾಡಿನ ಮುದವನ್ನು ನೀಡಲಿದೆ! ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರಾಜ್ಯದ 3ನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಯ #ಮಮದಾಪುರ ಕೆರೆ ಅಂಗಳದಲ್ಲಿ ರಾಜ್ಯಕ್ಕೇ ಮಾದರಿ ಎನಿಸುವ ಅರಣ್ಯ ಅರಳಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಕೋಟಿ ವೃಕ್ಷ ಅಭಿಯಾನದಡಿ ಕಳೆದ ವರ್ಷ ಸುಮಾರು 60 ಸಾವಿರ ಗಿಡಗಳನ್ನು ನೆಟ್ಟು ಮರಗಳನ್ನಾಗಿಸುವ ಕಾರ್ಯವಾಗಿತ್ತು. ಈ ಬಾರಿ ಮಳೆಗಾಲಕ್ಕೂ ಮುನ್ನವೇ ಗಿಡಗಳನ್ನು ನೆಡಲು ಅನುಕೂಲವಾಗುವಂತೆ ಗುಂಡಿಗಳನ್ನು ತೋಡಲಾಗಿದೆ. ಸಹಸ್ರಾರು ಗಿಡಗಳು ಅರಳಿ, ಪ್ರಾಣವಾಯುವನ್ನು ಉತ್ಪಾದಿಸಲಿದೆ. ನಮ್ಮ ಬಸವನಾಡು ಮತ್ತಷ್ಟು ಹಸಿರು ಸಿರಿ ಹೊದ್ದು, ಮಲೆನಾಡಿನ ಮುದವನ್ನು ನೀಡಲಿದೆ! ಎಂದಿದ್ದಾರೆ.

Previous articleಹಣದ ಜಾಡು ಎಲ್ಲಿದೆ? ಹಣ ಎಲ್ಲಿಗೆ ಹೋಯಿತು?
Next articleಪತಿ ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು ಉಲ್ಲೇಖಿಸಿದ ಸುನಿತಾ