ಶಿರಸಿ: ಖರೀದಿಸಿದ ಬಟ್ಟೆ ಬದಲಿಸಲೆಂದು ಬಂದ ಗ್ರಾಹಕನೊಬ್ಬ ಇನ್ನೋರ್ವನನ್ನು ಕರೆತಂದು ಅಂಗಡಿಯವರ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಸಿಪಿ ಬಝಾರನಲ್ಲಿನ ಸಾಗರ ಶೋರೂಮ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.
ನೆಹರೂನಗರದ ಮಹಮ್ಮದ ಷರೀಫ್ ಅಬ್ದುಲ್ ವಹಾಬ್ ಖಾನ ಹಾಗೂ ಸರ್ಫರಾಜ ಅಬ್ದುಲ್ ಅಸ್ಲಾಂ ಅಂಗಡಿಗೆ ಬಂದು ಖರೀದಿಸಿದ ಬಟ್ಟೆ ಬದಲಿಸಲು ಹುಡುಕಾಟ ನಡೆಸಿ, ಸರಿಯಾದದ್ದು ಇಲ್ಲವೆಂದು ಹೇಳಿ ಬೈದು, ಹಣ ಮರಳಿಸುವುದಾಗಿ ಹೇಳಿದರೂ ಹೊರ ಹೋಗಿ ಸರ್ಫರಾಜ್ ಎನ್ನುವವನನ್ನು ಕರೆತಂದು ಹಲ್ಲೆ ನಡೆಸಿದ್ದಾರೆ. ರಕ್ಷಿಸಲು ಬಂದವನ ಮೇಲೂ ಹಲ್ಲೆ ನಡೆಸಿರುವುದಾಗಿ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಸಾಗರ ಶೋರೂಮ್‌ನ ಬಲರಾಮ ಶೇನಾಧಿ ಗ್ಯಾಲೋ ಹಾಗೂ ಪ್ರಕಾಶ ಬಲರಾಮ ಪಟೇಲ್ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.