ಬಜೆಟ್ ಮಂಡನೆ ಸುಳ್ಳುಗಳ ಕಂತೆ: ಸುರ್ಜೇವಾಲಾ ವ್ಯಂಗ್ಯ

0
31
surjewala

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಸುಳ್ಳಿನ ಕಂತೆ. ಬಜೆಟ್ ಪೂರ್ಣ ಸುಳ್ಳು ಸುಳ್ಳು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳನ್ನೇ ವ್ಯವಸ್ಥಿತವಾಗಿ ಹೇಳ್ತಾರೆ. ಮುಖ್ಯಮಂತ್ರಿಗಳೂ ಅದನ್ನೇ ಮಾಡಿದ್ದಾರೆ.
ಕಳೆದ ಬಜೆಟ್‌ನಲ್ಲಿ ಕೊಟ್ಟ ಭರವಸೆ ಕಥೆ ಏನಾಯ್ತು. ಕಳೆದ ವರ್ಷದ ೨೪೦ ಭರವಸೆ ಹಣಕಾಸು ಇಲಾಖೆ ಹಂತದಲ್ಲಿವೆ. ೧೩೨ ಭರವಸೆಗಳನ್ನು ಟಚ್ ಮಾಡಿಯೇ ಇಲ್ಲ. ಕಳೆದ ಬಜೆಟ್ ಎರಡೂವರೆ ಲಕ್ಷದ ಬಜೆಟ್ ಮಂಡನೆಯಾಗಿತ್ತು. ಶೇ. ೪೫ರಷ್ಟು ಬಜೆಟ್ ಸಹ ಖರ್ಚು ಮಾಡಿಲ್ಲ ಎಂದು ಟೀಕಿಸಿದರು.

Previous articleJDS ಮಹಿಳಾ ಘಟಕದ ರಾಜ್ಯ ಕಾರ್ಯಾಧ್ಯಕ್ಷೆಯಾಗಿ ನಜ್ಮಾ
Next articleಕಾಂಗ್ರೆಸ್ಸಿಗೆ ಇನ್ಮುಂದೆ ಚೆಂಡು ಹೂವೇ ಶಾಶ್ವತ : ಸಿ.ಟಿ ರವಿ ವ್ಯಂಗ್ಯ