ಪ್ಯಾರಿಸ್: ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ಫ್ರಾಂಕೊಯಿಸ್ ಬೈರೂ ಅವರನ್ನು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನೇಮಿಸಿದ್ದಾರೆ. ಬೈರೂ ನೂತನ ಸರ್ಕಾರ ರಚಿಸಲಿದ್ದಾರೆ ಎಂದು ತಿಳಿಸಲಾಗಿದೆ. ೭೩ ವರ್ಷದ ಬೈರೂ ಫ್ರಾನ್ಸ್ ರಾಜಕಾರಣದಲ್ಲಿ ತಮ್ಮದೇ ಛಾಪು ಒತ್ತಿದ್ದಾರೆ. ಮ್ಯಾಕ್ರನ್ ಅವರ ಮೈತ್ರಿಕೂಟದಲ್ಲಿ ನಿರ್ಣಾಯಕ ಪಾತ್ರವನ್ನೂ ವಹಿಸಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಜೆಟ್ ವಿವಾದ ಹೆಚ್ಚಾದ ಪರಿಣಾಮ ಹಿಂದಿನ ಪ್ರಧಾನಿ ಮೈಕೆಲ್ ಬರ್ನಿಯರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಕಳೆದ ವಾರ ಅವರು ರಾಜೀನಾಮೆ ನೀಡಿದ್ದರು.