ಫೆಬ್ರವರಿಯಲ್ಲೇ ಬಜೆಟ್

0
18
ಸಿದ್ದು

ಹಾವೇರಿ: ಮುಂಬರುವ ಮಾರ್ಚ್‌ನಲ್ಲಿ ಲೋಕಸಭಾ ಚುನಾವಣೆ ಬರುವ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲೇ ಬಜೆಟ್ ಮಂಡಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹಾವೇರಿ ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಾನಗಲ್ಲ ಗ್ಯಾಂಗ್ ರೇಪ್ ಸಂತ್ರಸ್ಥೆಯ ಕುಟುಂಬಸ್ಥರನ್ನು ಭೇಟಿ ಮಾಡಿ ಅವರಿಂದ ಮನವಿ ಸ್ವೀಕರಿಸಿದರು.ಆ ಕುಟುಂಬಕ್ಕೆ ದೈರ್ಯ ತುಂಬಿ ಹಾಗೂ ಸಾಂತ್ವಾನ ಹೇಳಿದರು.
ಘಟನೆ ಕುರಿತು ತನಿಖೆ ಮಾಡುವುದಾಗಿ ಭರವಸೆ ನೀಡಿದ್ದೇನೆ. ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇವೆ. ನೈತಿಕ ಪೋಲೀಸಗಿರಿ ಮೂಲಕ ಯಾರನ್ನು ಕಾನೂನು ಕೈಗೆ ತೆಗೆದುಕೊಳ್ಳೋಕೆ ಬಿಡುವುದಿಲ್ಲ. ಕಾನೂನಿನ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ.
ಈ ಕೇಸ್‌ನಲ್ಲಿ ಯಾರನ್ನು ಬಿಡುವುದಿಲ್ಲ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇವೆ. ಸಂತ್ರಸ್ಥೆಯ ಸಹೋದರಿಯಿಂದ ಈಗ ತಾನೇ ಅರ್ಜಿ ತೆಗೆದುಕೊಂಡಿದೆನಿ ಪರಿಶೀಲನೆ ಮಾಡ್ತೇವಿ
ಎಸ್‌ಐಟಿಯಲ್ಲೂ ಪೊಲೀಸರೆ ಇರ್ತಾರೆ ಅಲ್ವಾ ಹೀಗಾಗಿ ಅಗತ್ಯ ಇಲ್ಲಾ. ಬೊಮ್ಮಾಯಿ ಹೇಳ್ತಾರೆ ಅಂತಾ ಮಾಡಲ್ಲ. ಯಾರು ತಪ್ಪು ಮಾಡಿದಾರೊ ಕ್ರಮ ತಗೊತೆವಿ. ಎಲ್ಲಕ್ಕಿಂತ ಮುಖ್ಯವಾಗಿ ಕಾನೂನಿನ ರೀತಿಯಲ್ಲಿ ಮಾಜಿ ಸಚಿವ ಬಸವರಾಜ ಶಿವಣ್ಣನವರ ಸಂತ್ರಸ್ಥೆಗೆ ಸಾಂತ್ವಾನ ಹೇಳಿದಾರೆ ಎಂದರು.
ಅನಂತಕುಮಾರ್ ಏಕವಚನದಲ್ಲಿ ಹೇಳಿಕೆಯ ವಿಚಾರ
ರಾಜಕೀಯವಾಗಿ ಆರೋಪ ಮಾಡ್ತಾರೆ. ಇಲ್ಲಿತನಕ ನಾಪತ್ತೆಯಾಗಿ ಚುನಾವಣೆ ಬಂದಾಗ ಬಂದಿದಾರೆ. ಅವರು ಏನಾಸರೂ ಕೆಲಸ ಮಾಡಿದಾರಾ? ಬಡವರ ಕೆಲಸ ಮಾಡಿದಾರಾ? ಇವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಎಂದರೆ ಏನ್ ಗೊತ್ತಾ ಮನಷ್ಯತ್ವ ಅಂತಾ. ಮೊದಲು ಮನಷ್ಯತ್ವ ಇರಬೇಕು ಎಂದು ತಿರಗೇಟು ನೀಡಿದರು.

Previous articleರಾಮಮಂದಿರಕ್ಕೆ ಹೋಗಿ ನಿಮ್ಮ ಪಾಪ ತೊಳೆದುಕೊಂಡು ಬನ್ನಿ
Next articleಗುಟ್ಕಾ ಕಂಪನಿ ಮೇಲೆ ಪೊಲೀಸರ ದಾಳಿ