Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಪ್ರೇಮಿಗಾಗಿ ಪತಿಯನ್ನೆ ಕೊಂದ ಪತ್ನಿ

ಪ್ರೇಮಿಗಾಗಿ ಪತಿಯನ್ನೆ ಕೊಂದ ಪತ್ನಿ

0
79
ಸಾವು

ಚಿಕ್ಕಮಗಳೂರು: ಪ್ರೇಮಿ ಜೊತೆ ಸೇರಲು ಊಟದಲ್ಲಿ ನಿದ್ರೆ ಮಾತ್ರ ಸೇರಿಸಿ ಪತಿಯನ್ನು ಪತ್ನಿಯೇ ಕೊಂದ ಘಟನೆ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ಘಟನೆ ನಡೆದಿದೆ.
ಪ್ರಜ್ಞೆ ತಪ್ಪಿದ ಪತಿಯನ್ನು ಪ್ರೇಮಿ ಜೊತೆ ಬೈಕಲ್ಲಿ ತಂದು ಕೆರೆಗೆ ಪತ್ನಿ ಎಸೆದಿದ್ದಾಳೆ, ಪತ್ನಿ ಕಣ್ಣಾಮುಚ್ಚಾಲೆ ಆಟಕ್ಕೆ ಪತಿ ನವೀನ್ (28) ಬಲಿಯಾಗಿದ್ದಾನೆ.
ಆ. 6ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿದ್ದು, ಇದು ಸಹಜ ಸಾವಲ್ಲ, ಕೊಲೆ ಎಂದು ನವೀನ್ ಪೋಷಕರು ದೂರು ಸಲ್ಲಿಸಿದ್ದರು.
ಪ್ರೇಮಿ ಸಂಜಯ್ ಜೊತೆ ಇರಲು ಪತಿ ನವೀನ್ ಅಡ್ಡಗಾಲಾಗುತ್ತಿದ್ದ ಎನ್ನುವ ಕಾರಣಕ್ಕೆ ಪತ್ನಿ ಪಾವನ ಈ ಕೃತ್ಯ ಎಸಗಿದ್ದಾಳೆ.
ಕಡೂರು ತಾಲೂಕು ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.

Previous articleಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಬಾರಿ ಅಗ್ನಿ ಅನಾಹುತ
Next articleಆಸ್ತಿ ಮಾರಾಟ ಮಧ್ಯಸ್ಥಿಕೆ: ಕೊಲೆಯಲ್ಲಿ ಅಂತ್ಯ