ಪ್ರವಾಸಿಗರ ರಕ್ಷಣೆ ಮಾಡಲು ಭಯೋತ್ಪಾದಕರ ವಿರುದ್ಧ ಹೋರಾಡಿ ಮೃತಪಟ್ಟ ಆದಿಲ್ ಹುಸೇನ್

0
32

ಶ್ರೀನಗರ : ನಿನ್ನೆ ನಡೆದ ಜಮ್ಮು ಕಾಶ್ಮೀರ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಯಲ್ಲಿ ಸೈಯದ್ ಆದಿಲ್ ಹುಸೇನ್ ಷಾ ಎಂಬಾತ ಭಯೋತ್ಪಾದಕನ ವಿರುದ್ಧ ಹೋರಾಡಿ ಹತನಾಗಿದ್ದಾನೆ.
ಪ್ರವಾಸಿಗರ ಮೇಲೆ ದಾಳಿ ಮಾಡುತ್ತಿದ್ದಾಗ ಭಯೋತ್ಪಾದಕರ ಕೈಯಿಂದ ರೈಫಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಕುದುರೆ ಸವಾರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸೈಯದ್ ಆದಿಲ್ ಹುಸೇನ್ ಶಾ ಪ್ರವಾಸಿಗರನ್ನು ತನ್ನ ಕುದುರೆಯ ಮೇಲೆ ಕರೆದೊಯ್ಯುತ್ತಿದ್ದರು. ಈ ವೇಳೆ ಭಯೋತ್ಪಾದಕನೋರ್ವ ಗುಂಡಿನ ದಾಳಿ ನಡೆಸುತ್ತಿರುವುದನ್ನು ನೋಡಿದ ಅವರು ಆತನಿಂದ ರೈಫಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದರು. ಸೈಯದ್ ತಂದೆ ಉಗ್ರರ ದಾಳಿ ತಿಳಿಯುತ್ತಿದಂತೆ ಮದ್ಯಾಹ್ನ ಆದಿಲ್ ಹುಸೇನ್ ಷಾ ಕರೆ ಮಾಡಿದ್ದು ಅವನ ಫೋನ್ ಸ್ವಿಚ್ ಆಫ್ ಬಂದಿದೆ, ಕೂಡಲೇ ಭಯವೀತರಾದ ಅವರು ಪೊಲೀಸ್ ಠಾಣೆಗೆ ಧಾವಿಸಿದ್ದಾರೆ, ಆಗ ಸೈಯದ್ ಆದಿಲ್ ಹುಸೇನ್ ಷಾ ಗುಂಡಿನ ದಾಳಿಯಲ್ಲಿ ಹತನಾದ ವಿಷಯ ತಿಳಿದಿದೆ.

Previous articleಕಾಶ್ಮೀರದಲ್ಲಿ ಚಿಕ್ಕಮಗಳೂರಿನವರು ಸುರಕ್ಷಿತ
Next articleಉಗ್ರರ ದಾಳಿ ಖಂಡಿಸಿ ಸುಳ್ಯದಲ್ಲಿ ಪ್ರತಿಭಟನೆ