ಪ್ರವಾಸಿಗರ ಭದ್ರತೆ ರೆಸಾರ್ಟ್‌ಗಳ ಹೊಣೆ

0
30

ಕೊಪ್ಪಳ: ವಿದೇಶಿ ಪ್ರವಾಸಿಗರ ಸುರಕ್ಷೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಪ್ರವಾಸಿಗರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸಲು ರೆಸಾರ್ಟ್ ಮತ್ತು ಹೋಂ ಸ್ಟೇಗಳೇ ಹೊಣೆ ಹೊರಬೇಕು ಎಂದು ಸರ್ಕಾರ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದೆ.
ಪರವಾನಗಿ ಪಡೆಯದೇ ರೆಸಾರ್ಟ್ ಮತ್ತು ಹೋಂ ಸ್ಟೇಗಳು ರಾಜಾರೋಷವಾಗಿ ನಡೆಯುತ್ತಿವೆ. ವಿದೇಶಿ ಪ್ರವಾಸಿಗರು ಸೇರಿ ಎಲ್ಲ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆ ಒದಸಲು ಕ್ರಮ ಕೈಗೊಳ್ಳಬೇಕು. ನಿರ್ಜನ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಮುಂಚೆ ಪೊಲೀಸ್ ಅಧಿಕಾರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ದುಷ್ಕರ್ಮಿಗಳಿಂದ ಅಥವಾ ಪ್ರಾಣಿಗಳಿಂದ ಘಟನೆ ಸಂಭವಿಸಿದರೆ ಆಯಾ ಹೋಂ ಸ್ಟೇ ಮಾಲೀಕರೇ ಜವಾಬ್ದಾರರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿದೆ.

Previous articleಕಾರ್ಮಿಕನಿಗೆ ಷೇರು ಮಾರುಕಟ್ಟೆಯಲ್ಲಿ ₹12.31 ಲಕ್ಷ ವಂಚನೆ
Next articleರಾಜ್ಯ ಸರ್ಕಾರದಿಂದ ಹಲವು ಇಲಾಖೆಗಳ ಹಣ ದುರುಪಯೋಗ