ಪ್ರಧಾನಿ ಮೋದಿ ‘ನಾಲಾಯಕ್’ ಎಂದ ಪ್ರಿಯಾಂಕ್

0
22

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪ ‘ವಿಷ ಸರ್ಪ’ ಎಂದು ಹೇಳಿದ್ರೆ ಮಗ ಪ್ರಿಯಾಂಕ್ ಖರ್ಗೆ ಮೋದಿಯವರನ್ನು ಟೀಕಿಸುವ ಭರದಲ್ಲಿ ನಾಲಾಯಕ್ ಎಂದು ಮೂದಲಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ಮೋದಿ ಮಳಖೇಡಕ್ಕೆ ಬಂದಾಗ ಏನು ಹೇಳಿದ್ದರು ಏನ್ನುವುದನ್ನು‌ ನೆನಪಿಸಿಕೊಳ್ಳಲಿ. ಬಂಜಾರಾ ಸಮಾಜದ ಜನರನ್ನು ಉದ್ದೇಶಿಸಿ ತಮ್ಮ ಮಗ ದೆಹಲಿಯಲ್ಲಿದ್ದಾನೆ ಅಂತ ಹೇಳಿದ್ದರು. ಆದ್ರೆ ಇಂತಹ ನಾಲಾಯಕ್ ಮಗನಿದ್ರೆ ಹೇಗೆ ನಡೆಯುತ್ತೆ? ದೇಶ ನಡೆಸೋನು ಮಾತ್ರವಲ್ಲ.. ಮನೆಯಲ್ಲಿ ಒಬ್ಬ ನಾಲಾಯಕ್ ಮಗನಿದ್ರೂ ಮನೆ ಸುಸೂತ್ರವಾಗಿ ನಡೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯ ಅಂತ್ಯದಲ್ಲಿ ನಾನು ನರೇಂದ್ರ ಮೋದಿಗೆ ಹಾಗೆ ಅಂದಿಲ್ಲ. ನನಗೆ ವೈಯಕ್ತಿಕ ನಿಂದನೆಗಿಂತ ನನ್ನ ಪ್ರಶ್ನೆಗಳಿಗೆ ಉತ್ತರ ಬೇಕಿತ್ತು ಎಂದು ಪ್ರಿಯಾಂಕ್ ಖರ್ಗೆ ತನ್ನ ನಾಲಾಯಕ್ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

Previous articleಯಾವ ಕಾರಣಕ್ಕೂ ಬಿಜೆಪಿ ಲಿಂಗಾಯತರನ್ನು ಸಿಎಂ ಮಾಡುವುದಿಲ್ಲ
Next articleಕೃಷ್ಣಾ ನದಿಗೆ 3 ಟಿಎಂಸಿ ನೀರು ಹರಿಸಿದ ಮಹಾರಾಷ್ಟ್ರ