ಪ್ರಧಾನಿ ಮೋದಿ ಗ್ಯಾರಂಟಿ ಮೇಲೆ ವಿಶ್ವಾಸವಿಡಿ

0
11

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ `ಗ್ಯಾರಂಟಿ’ ಮೇಲೆ ವಿಶ್ವಾಸವಿಡಿ, ಮೂರು ವರ್ಷಗಳಲ್ಲಿ ನಮ್ಮ ಭಾರತ ವಿಶ್ವದ ೩ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಹೇಳಿದರು.
ವರೂರಿನ ನವಗೃಹ ತೀರ್ಥ ಕ್ಷೇತ್ರದಲ್ಲಿ ಶ್ರೀ ಪದ್ಮಾವತಿ ಮಾತಾ ಶಕ್ತಿ ಪೀಠ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಸಂದರ್ಭದಲ್ಲಿ ಭಾರತ ಜಾಗತಿಕ ಆರ್ಥಿಕ ಪಟ್ಟಿಯಲ್ಲಿ ಭಾರತ ೧೧ನೇ ಸ್ಥಾನದಲ್ಲಿತ್ತು, ಆದರೆ, ೧೦ ವರ್ಷಗಳಲ್ಲಿ ೫ನೇ ಸ್ಥಾನಕ್ಕೇರಿದೆ. ಮುಂದಿನ ೩ ವರ್ಷಗಳಲ್ಲಿ ತೃತೀಯ ಸ್ಥಾನಕ್ಕೇರುವುದರಲ್ಲಿ ಸಂಶಯವಿಲ್ಲ. ಪ್ರಧಾನಿ ಮೋದಿ ಅವರ ನಾಯಕತ್ವ, ಬದ್ಧತೆ ಹಾಗೂ ದೂರದೃಷ್ಟಿಯಿಂದಾಗಿ ಭಾರತ ಅಗ್ರಗಣ್ಯ ದೇಶವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಯುವಕರ ಸಹಕಾರ ಅವಶ್ಯಕ ಎಂದರು.

Previous articleವಿದ್ಯುತ್ ಬಳಕೆದಾರರಿಗೆ ಗುಡ್​​ನ್ಯೂಸ್
Next articleನಾನು ಯಾರಿಂದಲೋ ದೇಶಭಕ್ತಿ ಬಗ್ಗೆ ಕಲಿಯಬೇಕಿಲ್ಲ