ಪೌಷ್ಟಿಕ ಆಹಾರ ವಿತರಣೆಗೆ ಮಿಲೆಟ್ಸ್ ಖರೀದಿ ಹೆಚ್ಚಳ

0
19

2023-24ರ ಮುಂಗಾರು ಋತುವಿನ 12.49 LMT ಮಿಲೆಟ್ಸ್ ಖರೀದಿ

ನವದೆಹಲಿ: ದೇಶವಾಸಿಗಳಿಗೆ ಅಗತ್ಯ ಪೌಷ್ಟಿಕ ಆಹಾರ ವಿತರಣೆಗಾಗಿ ಕೇಂದ್ರ ಸರ್ಕಾರ ಮಿಲೆಟ್ಸ್ ಖರೀದಿಯನ್ನು ಹೆಚ್ಚಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರನೇ ಅವಧಿ ಆಡಳಿತದಲ್ಲಿ ಹಿಂದೆಂದಿಗಿಂತ ಅಧಿಕ ಮಿಲೆಟ್ಸ್ ಖರೀದಿ ಮಾಡುತ್ತಿದೆ ಎಂದಿದ್ದಾರೆ.

12.49 ಲಕ್ಷ ಮೆಟ್ರಿಕ್ ಟನ್ ಖರೀದಿ: ಕೇಂದ್ರ ಸರ್ಕಾರ, 2023-24ರ ಮುಂಗಾರು ಮಾರುಕಟ್ಟೆ ಋತುವಿನಲ್ಲಿ 12.49 ಲಕ್ಷ ಮೆಟ್ರಿಕ್ ಟನ್ ಮಿಲೆಟ್ಸ್ ಖರೀದಿ ಮಾಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.170ರಷ್ಟು ಮಿಲೆಟ್ಸ್ ಖರೀದಿ ಹೆಚ್ಚಳ ಕಂಡಿರುವುದು ಗಮನಾರ್ಹ ಸಂಗತಿಯಾಗಿದೆ ಎಂದಿದ್ದಾರೆ ಸಚಿವರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಇತರ ಕಲ್ಯಾಣ ಯೋಜನೆಗಳ ಫಲಾನುಭವಿಗಳಲ್ಲಿ ಪೌಷ್ಟಿಕಾಂಶಕ್ಕೆ ಮಹತ್ವ ನೀಡಿದೆ.

ಈ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಮಿಲೆಟ್ಸ್ ಖರೀದಿಯಲ್ಲಿನ ಹೆಚ್ಚಳ ಪ್ರಮುಖವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

Previous articleಮನಸ್ಸಿಗೆ ನೋವಾದಾಗ… ನಾಲಿಗೆ ಮೌನವಾಗಿರಲಿ
Next articleIND vs NZ: ಭಾರತದ ಉತ್ತಮ ಆರಂಭ