ಪುಟ್ಟ ಕಂದಮ್ಮಗೆ ಉರುಳಾದ ಜೋಲಿ!

0
30

ಸಂ.ಕ. ಸಮಾಚಾರ, ಉಡುಪಿ: ಬಾಡಿಗೆ ಮನೆಯೊಂದರಲ್ಲಿ ಜೋಗುಳಕ್ಕೆ ಕಟ್ಟಿದ್ದ (ಜೋಲಿ) ಸೀರೆ ಮಗುವಿನ ಕುತ್ತಿಗೆಗೆ ಸುತ್ತಿಕೊಂಡು ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನಿಟ್ಟೂರಿನಲ್ಲಿ ನಡೆದಿದೆ.
ಒಂದು ವರ್ಷದ ಕಾಳಮ್ಮ ಅಸುನೀಗಿದ ಮಗು. ಮಗುವನ್ನು ಬೆಳಿಗ್ಗೆ ಜೋಲಿಯಲ್ಲಿ ಮಲಗಿಸಿ ಅಯ್ಯಪ್ಪ ಮತ್ತು ಅವರ ಹೆಂಡತಿ ಕೆಲಸಕ್ಕೆ ಹೋಗಿದ್ದರು. ಎರಡು ಗಂಟೆಯ ಬಳಿಕ ಬಂದು ನೋಡಿದಾಗ ಕಟ್ಟಿದ್ದ ಸೀರೆ ಮಗುವಿನ ಕುತ್ತಿಗೆಯಲ್ಲಿ ನೇತಾಡುತ್ತಿತ್ತು.
ಕೂಡಲೇ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿತಾದರೂ ಅದಾಗಲೇ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಸಾವಿನಲ್ಲೂ ಸಣ್ಣತನ ಪ್ರದರ್ಶನ ಮಾಡುವ ದುಸ್ಸಾಹಸ ಮಾಡಬೇಡಿ
Next articleRCB ವಿಜಯೋತ್ಸವದ ವೇಳೆ ಕಾಲ್ತುಳಿತ: ತಪ್ಪು ಯಾರೇ ಮಾಡಿದ್ದರೂ ಕ್ರಮ