Home Advertisement
Home ಅಪರಾಧ ಪಿರ್ತಾಜಿತ ಆಸ್ತಿ ವಿವಾದ ತಮ್ಮಂದಿರಿಂದ ಅಣ್ಣನ ಕೊಲೆ

ಪಿರ್ತಾಜಿತ ಆಸ್ತಿ ವಿವಾದ ತಮ್ಮಂದಿರಿಂದ ಅಣ್ಣನ ಕೊಲೆ

0
100

ರಾಯಚೂರು:ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ತಮ್ಮಂದಿರೇ ಅಣ್ಣನನ್ನು ರಾಡ್ ಮತ್ತು ದೊಣ್ಣೆಯಿಂದ ಹೊಡೆದು ಕೊಂದ ಘಟನೆ ಕುರ್ಡಿ ಗ್ರಾಮದಲ್ಲಿ ಘಟನೆ ಗುರುವಾರ ಸಂಜೆ ನಡೆದಿದೆ.
ಪಿತ್ರಾರ್ಜಿತ ಆಸ್ತಿ ವಿವಾದ ತಮ್ಮಂದಿರೇ ಅಣ್ಣನ ಕೊಲೆ ಮಾಡಿದ್ದಾರೆ.‌ ಸಂಜಯ್ ಕುರ್ಡಿಕರ್ (38) ಕೊಲೆಯಾದ ವ್ಯಕ್ತಿಯಾಗಿದ್ದು, ಕಬ್ಬಿಣದ ರಾಡ್, ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಕುರುಡಿ ಗ್ರಾಮದ ದೇವಿ ವೃತ್ತದಲ್ಲಿ ಇರುವ ಕಟ್ಟೆಯ ಮೇಲೆ ಹಾಡಹಗಲೇ ಹೊಡೆದು ಅಣ್ಣನ ಕೊಲೆ ಮಾಡಿದ್ದಾರೆ.
ಇನ್ನು ಕೊಲೆ ಮಾಡಿದ ಆರೋಪಿಗಳಾದ ಸಂಜೀವ್, ಸಂಘರ್ಷ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಆರು ಜನ ಆರೋಪಿಗಳು ಪರಾರಿಯಾಗಿದ್ದಾರೆ. ಪಿತ್ರಾರ್ಜಿತ ಆಸ್ತಿ ಅಣ್ಣತಮ್ಮಂದಿರಿಗೆ ಭಾಗ ಆಗಿರಲಿಲ್ಲ, ನ್ಯಾಯಾಲಯ ಮೆಟ್ಟಿಲು ಏರಿ ತನ್ನ ಪಾಲಿನ ಆಸ್ತಿ ಪಡೆದಿದ್ದ ಅಣ್ಣ ಸಂಜಯ್, ಇದೇ ವಿಚಾರಕ್ಕೆ ಜಗಳವಾಗಿದ್ದು ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ, ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ *.*

Previous articleಪತ್ನಿಯನ್ನೇ ಕೊಂದ ಪತಿ!
Next articleಕೌಟುಂಬಿಕ ಕಲಹ ಅಜ್ಜಿ. ಪತ್ನಿ ಕೊಲೆಗೈದ ಪತಿ