Home Advertisement
Home ತಾಜಾ ಸುದ್ದಿ ಪಿಯು ಫಲಿತಾಂಶ: ಮಂಡ್ಯಕ್ಕೆ 20ನೇ ಸ್ಥಾನ

ಪಿಯು ಫಲಿತಾಂಶ: ಮಂಡ್ಯಕ್ಕೆ 20ನೇ ಸ್ಥಾನ

0
94

ಮಂಡ್ಯ: ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆ 20ನೇ ಸ್ಥಾನಕ್ಕೆ ತಲುಪಿ ಶೇ. 73.04ರಷ್ಟು ಫಲಿತಾಂಶ ಲಭಿಸಿದೆ.
ಒಟ್ಟು 14,524 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 10,609 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಅದರಲ್ಲಿ 12,105 ಹೊಸಬರ ಪೈಕಿ 9,378 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 77.47 ಫಲಿತಾಂಶ ಕಂಡಿದೆ.
ಕಲಾ ವಿಭಾಗದಲ್ಲಿ 3,828 ವಿದ್ಯಾರ್ಥಿಗಳ ಪೈಕಿ 2,219 ವಿದ್ಯಾರ್ಥಿಗಳು ಪಾಸಾಗಿ ಶೇ. 57.97 ಫಲಿತಾಂಶ ಹೊರಹೊಮ್ಮಿದೆ. ವಾಣಿಜ್ಯ ವಿಭಾಗದಲ್ಲಿ 5,185 ವಿದ್ಯಾರ್ಥಿಗಳ ಪೈಕಿ 3,691 ಉತೀರ್ಣರಾಗಿ 71.19 ರಷ್ಟು ಶೇಕಡವಾರು ಫಲಿತಾಂಶ ಲಭ್ಯವಾಗಿದೆ. ವಿಜ್ಞಾನ ವಿಭಾಗದಲ್ಲಿ 5,511 ವಿದ್ಯಾರ್ಥಿಗಳ ಪೈಕಿ 4,699 ವಿದ್ಯಾರ್ಥಿಗಳು ಉತೀರ್ಣರಾಗಿದ್ದು ಶೇ. 85.27 ಫಲಿತಾಂಶ ದೊರೆತಿದೆ.
ಪಟ್ಟಣ ಪ್ರದೇಶದಿಂದ 8,208 ವಿದ್ಯಾರ್ಥಿಗಳ‌ ಪೈಕಿ 5,795 ಪಾಸಾಗಿ 70.60% ಹಾಗೂ ಗ್ರಾಮೀಣ ಪ್ರದೇಶದಿಂದ 6,316 ವಿದ್ಯಾರ್ಥಿಗಳ ಪೈಕಿ 4,814 ವಿದ್ಯಾರ್ಥಿಗಳು ಉತೀರ್ಣರಾಗಿ 76.22% ಫಲಿತಾಂಶ ದಾಖಲಾಗಿದೆ.

Previous articleಪಿಯುಸಿ: ತಾಯಿ, ಮಗಳು ಉತ್ತೀರ್ಣ
Next articleವೇಷ ತೊಟ್ಟು‌ ಮತಯಾಚನೆಗೆ ಬರುವವರನ್ನು ಪ್ರಶ್ನಿಸಿ