ಪಾಕಿಸ್ತಾನದ ಎಲ್ಲ ಡ್ರೋನ್‌ಗಳು ನಾಶ

0
41

ನವದೆಹಲಿ: ಗುರುವಾರ ರಾತ್ರಿ 300-400 ಟರ್ಕಿ ನಿರ್ಮಿತ ಡ್ರೋನ್‌ಗಳನ್ನು ಬಳಸಿ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದರಲ್ಲೂ ದೇಶದ ಧಾರ್ಮಿಕ ಸ್ಥಳಗಳಾದ ಗುರುದ್ವಾರ, ಚರ್ಚ್ ಹಾಗೂ ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ಪಾಕ್ ದಾಳಿ ಮಾಡಿರುವುದು ಗೊತ್ತಾಗಿದೆ.
ಆದರೆ ಬಹತೇಕ ಡ್ರೋನ್‌ಗಳನ್ನು ಹೊಡೆದು ರುಳಿಸುವಲ್ಲಿ ಹಾಗೂ ನಿಷ್ಕ್ರಿಯಗೊಳಿಸುವಲ್ಲಿ ಭಾರತ ಯಶಸ್ವಿಯಾಗಿದ್ದು ಶತ್ರುರಾಷ್ಟ್ರಕ್ಕೆ ತಿರುಗೇಟು ನೀಡಿದೆ. ಈ ಬಗ್ಗೆ ಖುದ್ದು ಕೇಂದ್ರ ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ.
ಭಾರತದ ೩೬ ಕಡೆ ೩೦೦-೪೦೦ ಡ್ರೋನ್‌ಗಳನ್ನು ಬಳಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದೆ. ಗುರುವಾರ ರಾತ್ರಿ ೯ ಗಂಟೆಯ ವೇಳೆಗೆ ಆರಂಭವಾದ ಈ ದಾಳಿ ಮಧ್ಯರಾತ್ರಿಯವರೆಗೂ ನಿರಂತರವಾಗಿ ಮುಂದುವರಿದಿದೆ. ಆದರೆ ಪಾಕಿಸ್ತಾನದ ಎಲ್ಲ ಡ್ರೋನ್‌ಗಳನ್ನು ನಾಶ ಮಾಡಿರುವ ಸೇನೆ, ದಾಳಿಯನ್ನು ವಿಫಲಗೊಳಿಸಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ತಿಳಿಸಿದ್ದಾರೆ.

Previous articleಎರಡೂ ಕೆನ್ನೆಗೆ ಹೊಡೆದರೆ ಏನು ಮಾಡಬೇಕೆಂಬುದನ್ನೆ ಗಾಂಧೀಜಿ ಹೇಳಿಲ್ಲ
Next articleವಂದೇ ಭಾರತ್ ರೈಲಿಗೆ ಕಲ್ಲು ತೂರಾಟ: ಇಬ್ಬರ ಬಂಧನ