ಪರೀಕ್ಷೆಗೂ ಮುನ್ನ ಮೂಗಬೊಟ್ಟಿಗೆ ಕತ್ತರಿ..!

0
18


ಬಾಗಲಕೋಟೆ; ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ರವಿವಾರ ನಡೆಯುತ್ತಿರುವ ಪರೀಕ್ಷೆಗೆ ಹಾಜರಾಗಲು ಬಂದ ಮಹಿಳಾ ಅಭ್ಯರ್ಥಿಗಳ ಮೂಗಬೊಟ್ಟು ಕತ್ತರಿಸಿ ಪ್ರವೇಶ ಕಲ್ಪಿಸಲಾಗಿದೆ.
ನಗರದ ಡಿಪ್ಲೊಮಾ ಕಾಲೇಜು ಕೇಂದ್ರವೂ ಸೇರಿದಂತೆ ಹಲವೆಡೆ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷಾ ಸಿಬ್ಬಂದಿ ಪ್ರವೇಶ ದ್ವಾರದಲ್ಲಿ ಮಹಿಳೆಯರ ಮೂಗುಬೊಟ್ಟು ಕತ್ತರಿಸಿ ಒಳಗೆ ಬಿಟ್ಟಿದ್ದಾರೆ. ನುರಿತ ಅಕ್ಕಸಾಲಿಗರಾಗಿದ್ದರೆ ಸರಿಯಾಗಿ ಕತ್ತರಿಸಬಹುದು ಆದರೆ ಸಿಬ್ಬಂದಿಗೆ ಮೂಗುಬೊಟ್ಟು ಕತ್ತರಿಸುವ ಕತ್ತರಿ ನೀಡಿ ನಿಲ್ಲಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಅಲ್ಲದೇ ಮೊಗುಬೊಟ್ಟು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಕಾಪಿ ತಡೆಯುವ ನೆಪದಲ್ಲಿ ಅವೈಜ್ಞಾನಿಕವಾಗಿ ಈ ಮಟ್ಟಿಗೆ ಇಳಿಯುತ್ತಿರುವುದು ಸರಿಯಲ್ಲ ಎಂದು ಅಭ್ಯರ್ಥಿಗಳು ಸಿಬ್ಬಂದಿ ಎದುರು ಆಕ್ಷೇಪ ವ್ಯಕ್ತಪಡಿಸಿಯೇ ಪರೀಕ್ಷೆಗೆ ತೆರಳಿದ್ದಾರೆ.

Previous articleಕರ್ಮಗಳೆಲ್ಲ ನಿಮ್ಮ ಮುಖಕ್ಕೇ ರಾಚದಿದ್ದರೆ ಹೇಳಿ!
Next articleಅಬ್ಬಿಗೇರಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ