ಪತ್ನಿ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

0
106
ಆತ್ಮಹತ್ಯೆ

ಹಾವೇರಿ : ಮಾರಕಾಸ್ತ್ರದಿಂದ ಪತ್ನಿಯ ಬರ್ಬರ ಹತ್ಯೆ ಮಾಡಿ ನಂತರ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ತಾಲೂಕಿನ ಸಂಗೂರು ಗ್ರಾಮದಲ್ಲಿ ನಡೆದಿದೆ.
ದ್ರಾಕ್ಷಾಣೆವ್ವ ವಾರ್ತಿ(45 ವರ್ಷ) ಪತಿಯಿಂದ ಹತ್ಯೆಗೆ ಒಳಗಾದ ಪತ್ನಿ. ಪತ್ನಿಯ ಹತ್ಯೆ ಮಾಡಿದ ನಂತರ ಪ್ರಭು ವಾರ್ತಿ(52 ವರ್ಷ) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪತ್ನಿಯ ಮೇಲಿನ ಸಂಸಯದಿಂದ ಪತಿ ಮತ್ತು ಪತ್ನಿಯ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಬುಧವಾರ ಬೆಳಗಿನ ಜಾವ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಪತಿ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪತ್ನಿಯ ಹತ್ಯೆ ನಂತರ ಅಲ್ಲಿಯೇ ಮನೆ ಮುಂದೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಹತ್ಯೆ ಮಾಡಿ ಪತಿ ತಾನೂ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ವಿಷಯ ತಿಳಿದು ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಎಸ್ಪಿ ಡಾ.ಶಿವಕುಮಾರ ಗುಣಾರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Previous articleವಿದ್ಯುತ್ ದರ ಏರಿಕೆ: ಹಿಂದಿನ ಸರ್ಕಾರದ ನಿರ್ಧಾರ
Next articleಟ್ರ್ಯಾಕ್ಟರ್ ಪಲ್ಟಿ ಚಾಲಕ ಸ್ಥಳದಲ್ಲೆ ಸಾವು