ಪತಿ ನೆನೆದು ಕಣ್ಣೀರಿಟ್ಟ ಸಂಸದೆ..!

0
21
ಮಂಗಲಾ

ಬೆಳಗಾವಿ: ನಗರದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಉದ್ಘಾಟನೆ ಸಂದರ್ಭದಲ್ಲಿ ದಿವಂಗತ ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರನ್ನು ನೆನೆದು ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಕಣ್ಣೀರಿಟ್ಟರು.
ದಿ. ಸುರೇಶ ಅಂಗಡಿ ಅವರ ಕನಸು ಇಂದು ನನಸಾಗುತ್ತಿದೆ ಎಂದು ಮಂಗಲಾ ಕೆಲ ಕ್ಷಣ ಭಾವುಕರಾದರು. 198 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ನಗರದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಸುರೇಶ್ ಅಂಗಡಿ ಅವರ ಕನಸಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆದುಕೊಂಡು ಬಂದು ಉದ್ಘಾಟನೆ ಮಾಡುತ್ತೇನೆ ಎಂದು ಅವರು ಹೇಳುತ್ತಿದ್ದರು. ಈಗ ಅವರು ನಮ್ಮ ಜೊತೆ ಇಲ್ಲ ಎಂದು ಸ್ಮರಿಸಿದರು.
ಪ್ರಧಾನಿ ಮೋದಿ ಅವರಿಂದ ನವೀಕರಣಗೊಂದ ರೈಲ್ವೆ ನಿಲ್ದಾಣ ಉದ್ಘಾಟನೆ ಕಾರ್ಯ ನೆರವೇರುತ್ತಿರುವುದು ಸಂತೋಷ ತಂದಿದೆ ಎಂದರು.

Previous articleಜಾನಪದ ಗಾಯನ ನಿಲ್ಲಿಸಿದ ಗುರುರಾಜ ಕೆಂಧೂಳಿ
Next articleಕಾಂಗ್ರೆಸ್‌ನಿಂದ ರಾಜ್ಯ ನಾಯಕರಿಗೆ ಅಪಮಾನ