Home ನಮ್ಮ ಜಿಲ್ಲೆ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ: ಮೂವರು ಸಜೀವ ದಹನ

ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ: ಮೂವರು ಸಜೀವ ದಹನ

0

ಹಾವೇರಿ: ಹೊರವಲಯದ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ ಮೂವರು ಸಜೀವ ದಹನವಾಗಿರುವ ದುರ್ಘಟನೆ ಮಂಗಳವಾರ ಸಂಭವಿಸಿದೆ.
ಮಧ್ಯಾಹ್ನದ ವೇಳೆಗೆ ಹಾನಗಲ್ಲ ರಸ್ತೆಯಲ್ಲಿರುವ ವಿರೇಶ ಸಾತೇನಹಳ್ಳಿ ಅವರಿಗೆ ಸೇರಿದ ಪಟಾಕಿ ತುಂಬಿದ ಗೋದಾಮಿನಲ್ಲಿ ಬೆಂಕಿ ತಗಲಿತ್ತು. ಆಗ ಎರಡು ವಾಹನಗಳು ಸುಟ್ಟು ಭಸ್ಮವಾದ ಬಗ್ಗೆ ವರದಿ ಆಗಿತ್ತು.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಪರಿಶೀಲಿಸಿದಾಗ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಬೆಂಕಿಗೆ ಕೆನ್ನಾಲೆಗೆ ಸಿಲುಕಿ ಆಹುತಿ ಆಗಿರುವುದು ಗೊತ್ತಾಗಿದೆ. ಮೃತರನ್ನು ಕಾಟೇನಹಳ್ಳಿ ಗ್ರಾಮದ ದ್ಯಾಮಪ್ಪ ಓಲೇಕಾರ, ರಮೇಶ ಬಾರ್ಕಿ, ಶಿವಲಿಂಗ ಅಕ್ಕಿ ಎಂದು ಗುರುತಿಸಲಾಗಿದೆ. ವಾಸಿಂ‌ ಶಫಿ ಅಹ್ಮದ್, ಶೇರು ಮಾಳಪ್ಪ ಕಟ್ಟಿಮನಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version