ನ್ಯಾಯಾಲಯ ಮತ್ತು ಸರ್ಕಾರ ವಂಚಿಸಿದ ನಾಲ್ವರು ಭೂಪರ ವಿರುದ್ಧ ಎಫ್ಐಆರ್

0
14

ಮಂಡ್ಯ: ‌ ನಾಲೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನಿನ ಲೆಕ್ಕಾಚಾರವನ್ನೇ ಬದಲಿಸಿ ನ್ಯಾಯಾಲಯ ಮತ್ತು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಲಕ್ಷಾಂತರ ರೂ. ಕಬಳಿಸಲು ಯತ್ನಿಸಿದ ಪ್ರಕರಣ ಬಯಲಾಗಿದೆ
ಪ್ರಕರಣದಲ್ಲಿ ವಕೀಲರಾದ ಎ ಎನ್ ರಮೇಶ್ ವಿದ್ಯಾ ಡಿ ಸರ್ಕಾರಿ ವಕೀಲರಾದ ಎಲ್ ಉಮಾ ಹಾಗೂ ಭೂಮಿಯ ಒಡತಿ ಸಂಜೀವಮ್ಮ ಅವರುಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ
ಮದ್ದೂರು ತಾಲೂಕಿನ ಹೆಬ್ಬೆರಳು ಮತ್ತು ಅಂಕನಾಥಪುರ ಗ್ರಾಮಗಳಿಗೆ ಸೇರಿದ ಕೆಲ ಜಮೀನು ಮುತ್ತುರಾಯನಕೆರೆ ಪೋಷಕ ನಾಲಾ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸುವ ಸಂಬಂಧ ಜಿಲ್ಲಾಧಿಕಾರಿಗಳ ಅಧಿಸೂಚನೆಯಾಗಿತ್ತು ಆದರೆ ಹೆಬ್ಬೆರಳು ಗ್ರಾಮಕ್ಕೆ ಸೇರಿದ ಮಂಚಯ್ಯ ಬಿನ್ ಮೋಟಯ್ಯ ಎಂಬವರ ಹೆಸರಿನಲ್ಲಿ ಭೂಸ್ವಾಧೀನವಾಗಿದ್ದ ಅರ್ಧ ಗುಂಟೆ ಜಮೀನನ್ನು ಎಂಟು ಗುಂಟೆ ಎಂದು ತಪ್ಪಾಗಿ ನಮೂದಿಸಿ, ದುರುದ್ದೇಶ ಪೂರಕವಾಗಿ ಹಣವನ್ನು ಲಪಟಾಯಿಸುವ ಸಂಚಿನ ರೂಪವಾಗಿ ಎಂಟು ಗುಂಟೆ ಗೆ ₹ 24,52,871 ಲಕ್ಷ ಪರಿಹಾರವನ್ನು ಪಡೆದಿದ್ದು, ಸಂಜೀವಮ್ಮ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ನಂತರ ಸದರಿ ಜಾರಿ ಪ್ರಕರಣವನ್ನು ಲೋಕ ಅದಾಲತ್ ಮುಂದೆ ಮುಕ್ತಾಯಗೊಳಿಸಲು ಸಲ್ಲಿಸಿದ ಮೆಮೋ ಮೇರೆಗೆ ನ್ಯಾಯಾಲವು ಸದರಿ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.
ಬಳಿಕ 2023ರ ಫೆಬ್ರುವರಿ 20ರಂದು ವಿಶೇಷ ಭೂಸ್ವಾಧೀನಾಧಿಕಾರಿಗಳು ನಿಗದಿತ ಪ್ರಮಾಣಕ್ಕಿಂತ ಸುಮಾರು 20 ಲಕ್ಷ ರೂ ಹೆಚ್ಚುವರಿಯಾಗಿ ಪಾವತಿ ಮಾಡಿದ ತಪ್ಪಿನ ಅರಿವಾಗಿ ಸರ್ಕಾರಿ ವಕೀಲರಾದ ಎಲ್ ಉಮಾ ಅವರಿಗೆ ಪತ್ರ ಬರೆದು. ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ನಾಲ್ಕೈದು ತಿಂಗಳ ಕಾಲ ಯಾವುದೇ ಕ್ರಮ ಕೈಗೊಳ್ಳದೆ ಇದ್ದರಿಂದ ಜಿಲ್ಲಾ ಸರ್ಕಾರಿ ವಕೀಲರಾದ ಎಲ್ ಉಮಾ ಅವರು ಮೇಲ್ಕಂಡ ಎಲ್ಲಾ ಪತ್ರಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ನ್ಯಾಯಾಲಯದ ಸದರಿ ಆದೇಶವನ್ನು ತಿದ್ದುಪಡಿ ಮಾಡಿಸಲು ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದರು ಎಂಬುದು ವಕೀಲ ಟಿ ಬಾಲರಾಜು ಅವರ ಆರ್ ಟಿ ಐ ಅರ್ಜಿಯಿಂದಾಗಿ ಬಯಲಾಗಿದೆ.
ಈ ಹಿನ್ನೆಲೆಯಲ್ಲಿ ವಕೀಲರಾದ ಎ ಎನ್ ರಮೇಶ ಡಿ ವಿದ್ಯಾ ಜಮೀನಿನ ಮಾಲೀಕರಾದ ಮಂಚಯ್ಯ ಅವರ ನಿಧನದ ಬಳಿಕ ಅವರ ಪತ್ನಿ ಸಂಜೀವಮ್ಮ ಅಪರಾಧಿಕ ಒಳಸಂಚನ್ನು ರೂಪಿಸಿ ಕೊಡಬೇಕಾಗಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕಾಗಿ ಮೋಸದಿಂದ ಡಿಗ್ರಿ ಪಡೆದು ಜಾರಿ ಮಾಡಿಸಿದ ಹಾಗೂ ಸುಳ್ಳು ಎಂದು ಗೊತ್ತಿದ್ದು ಕೂಡ ಅಂತಹ ದಸ್ತಾವೇಜನ್ನು ಅಪ್ರಾಮಾಣಿಕವಾಗಿ ಬಳಸಿ ಹಿತಾಸಕ್ತಿ ಕಾಪಾಡಲು ಅಕ್ರಮ ಹಣ ಗಳಿಸುವ ಉದ್ದೇಶದಿಂದ ಸಾರ್ವಜನಿಕರ ತೆರಿಗೆ ಹಣವನ್ನು ನಷ್ಟ ಉಂಟು ಮಾಡಿದ್ದಲ್ಲದೆ ನ್ಯಾಯಾಲಯ ಹಾಗೂ ಸರ್ಕಾರವನ್ನು ವಂಚಿಸಿದ ಅಪರಾಧಕ್ಕಾಗಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆರ್‌ಟಿಐ ಕಾರ್ಯಕರ್ತ ಟಿ ಬಾಲರಾಜು ಅವರು ನೀಡಿದ ದೂರಿನ ಮೇರೆಗೆ ವಿರುದ್ಧ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Previous articleತ್ರಿಬಲ್ ರೈಡ್ ಚಾಲನೆ ತಡೆಗೆ ವಿಶೇಷ ಅಭಿಯಾನ
Next articleಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ಮಾಡಿಲ್ಲ ಎಂದು ಆಣೆ ಮಾಡಲಿ