ನೋ ಡ್ಯೂಟಿ: ಸಂಬಳ ಮಾತ್ರ ಗ್ಯಾರೆಂಟಿ

0
67

ಇಲಾಖೆಯಲ್ಲಿ 25 ಅಧಿಕಾರಿಗಳಿಗೆ 15 ತಿಂಗಳಿನಿಂದ ಸ್ಥಳ ನಿಯುಕ್ತಿ ಆಗದಿರುವ ವಿಷಯವೇ ಗೊತ್ತಿಲ್ಲ

ಬೆಂಗಳೂರು: ವರ್ಗಾವಣೆ ಡೀಲ್ ಕುದುರದಿದ್ದರೆ, ನೋ ಡ್ಯೂಟಿ, ಸಂಬಳ ಮಾತ್ರ ಗ್ಯಾರೆಂಟಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎಗ್ಗಿಲ್ಲದೆ ನಡೆಯುತ್ತಿರುವ ವರ್ಗಾವಣೆ ದಂಧೆಯ ಮತ್ತೊಂದು ಕರಾಳ ಮುಖ ಬಯಲಾಗಿದೆ. ವರ್ಗಾವಣೆ ಡೀಲ್ ಕುದುರದಿದ್ದರೆ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡದೆ ಬಿಟ್ಟಿ ಸಂಬಳ ಕೊಟ್ಟು ಕೂರಿಸುವ ಪರಿಪಾಠ ಆರಂಭವಾಗಿದ್ದು, ನಗರಾಭಿವೃದ್ದಿ ಇಲಾಖೆಯ 25 ಅಧಿಕಾರಿಗಳಿಗೆ ಕಳೆದ 15 ತಿಂಗಳಿನಿಂದ ಯಾವುದೇ ಸ್ಥಳ ನಿಯುಕ್ತಿ ಮಾಡದೆ ರಾಜ್ಯದ ಬೊಕ್ಕಸಕ್ಕೆ 2.40 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದೆ ಈ ದರಿದ್ರ ಕಾಂಗ್ರೆಸ್ ಸರ್ಕಾರ. ಸಿಎಂ ಸಿದ್ದರಾಮಯ್ಯನವರೇ, ಮೂಡಾ ಹಗರಣದ ಕಡತಗಳನ್ನ ಮೈಸೂರಿನಿಂದ ಬೆಂಗಳೂರಿಗೆ ತಂದು ಅವುಗಳನ್ನ ತಿದ್ದಿ, ತೀಡಿ, ತಿರುಚಿ ಸಾಕ್ಷಿ ನಾಶ ಮಾಡುವಲ್ಲಿ ಬ್ಯುಸಿ ಆಗಿರುವ ತಮ್ಮ ಆಪ್ತ ಸಚಿವ ಬೈರತಿ ಸುರೇಶ್ ಅವರಿಗೆ ಅವರ ಇಲಾಖೆಯಲ್ಲಿ 25 ಅಧಿಕಾರಿಗಳಿಗೆ 15 ತಿಂಗಳಿನಿಂದ ಸ್ಥಳ ನಿಯುಕ್ತಿ ಆಗದಿರುವ ವಿಷಯವೇ ಗೊತ್ತಿಲ್ಲವಂತೆ. ಇನ್ನಾದರೂ ಅವರಿಗೆ ಮೂಡಾ ಹಗರಣದ ಕಡತ ತಿರುಚುವ ಕೆಲಸದಿಂದ ಮುಕ್ತಿ ನೀಡಿ ಇಲಾಖೆಯ ಕರ್ತವ್ಯದ ಬಗ್ಗೆ ಗಮನ ಹರಿಸಲು ಬಿಡಿ. ಅಂದಹಾಗೆ ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ವರ್ಗಾವಣೆ ದಂಧೆಯಲ್ಲಿ ತಮ್ಮ ಪಾಲೆಷ್ಟು ಎಂದು ಪ್ರಶ್ನಿಸಿದ್ದಾರೆ.

Previous articleರೆಪೋ ದರ ಯಥಾಸ್ಥಿತಿ ಮುಂದುವರಿಸಿದ ಆರ್​ಬಿಐ
Next articleಭಾವನಾತ್ಮಕ ಸಂದೇಶ ಬರೆದು ಕುಸ್ತಿಗೆ ವಿದಾಯ ಹೇಳಿದ ವಿನೇಶ್​ ಫೋಗಟ್