Home Advertisement
Home ಅಪರಾಧ ನೈತಿಕ ಪೊಲೀಸ್‌ಗಿರಿ: ನಾಲ್ವರ ಬಂಧನ

ನೈತಿಕ ಪೊಲೀಸ್‌ಗಿರಿ: ನಾಲ್ವರ ಬಂಧನ

0
70

ಬೆಳಗಾವಿ: ಲವ್ ಜಿಹಾದ್ ಆರೋಪದ ಹಿನ್ನೆಲೆಯಲ್ಲಿ ಯುವಕನಿಗೆ ಗೂಸಾ ನೀಡಿ ನೈತಿಕ ಪೊಲೀಸಗಿರಿ ತೋರಿದ ನಾಲ್ವರನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಸಾಂವಗಾಂವ ಗ್ರಾಮದ ಜಮೀನಿನಲ್ಲಿ ಗೆಳತಿಯೊಂದಿಗೆ ಕುಳಿತಿದ್ದ ಯುವಕ ಮತ್ತು ಯುವತಿಯರನ್ನು ವಿಚಾರಿಸಿದಾಗ, ಯುವಕ ಡಿ ಫಾರ್ಮಸಿ ವಿದ್ಯಾರ್ಥಿ ಅಲ್ಲಾವುದ್ದೀನ್ ಪೀರಜಾದೆ ಜತೆಗೆ ಹಿಂದೂ ಯುವತಿ ಇದ್ದಾಳೆ ಎಂಬುದನ್ನು ತಿಳಿದುಕೊಂಡ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಅಲ್ಲಾವುದ್ದೀನ್ ಪೀರಜಾದೆ ಮೇಲೆ ಹಲ್ಲೆ ನಡೆಸಿದವರನ್ನು ಸಾಂವಗಾವ್ ಗ್ರಾಮದ ಸುದೇಶ ಪಾಟೀಲ, ಸಂತೋಷ ಜಾಧವ್, ಅನಗೋಳದ ನಿವಾಸಿಗಳಾದ ಜೈ ಇಂಚಲ್ ಮತ್ತು ಸುಮಿತ್ ಮೋರೆ ಎಂದು ಗುರುತಿಸಲಾಗಿದೆ. ಗಾಯಾಳು ಈ ನಾಲ್ವರ ವಿರುದ್ಧ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ವಿದ್ಯಾರ್ಥಿ ಕೊಟ್ಟ ದೂರಿನಂತೆ ೬ ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಂಧಿತರು ಯಾವುದೇ ಸಂಘ ಸಂಸ್ಥೆಯ ಸದಸ್ಯರಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Previous articleನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು
Next article19ರಂದು ಜೈನ ಸಮಾಜದಿಂದ ಬೆಂಗಳೂರು ಚಲೋ