ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಆಘಾತಕಾರಿಯಾದುದು. ರಾಜ್ಯ ಸರ್ಕಾರ ವಿಶೇಷ ತನಿಖಾ ದಳದಿಂದ ( ಎಸ್ಐಟಿ ) ತನಿಖೆ ಮಾಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಕಿಮ್ಸ್ ನ ಶವಗಾರಕ್ಕೆ ಭೇಟಿ ನೀಡಿ ನೇಹಾ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಇದೊಂದು ಗಂಭೀರ ಪ್ರಕರಣ ಸಮಾಜವೇ ತಲ್ಲಣಗೊಳ್ಳುವಂತಹ ಹೀನ ಕೃತ್ಯವಾಗಿದೆ. ಕಾನೂನು ಭಯ ಇಲ್ಲದ್ದರಿಂದ ಇಂತಹ ದೃಷ್ಕೃತ್ಯಗಳು ನಡೆಯುತ್ತಿವೆ. ಸರ್ಕಾರ ವಿಶೇಷ ತನಿಖಾ ತಂಡದಿಂದಲೇ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದರು.