Home Advertisement
Home ತಾಜಾ ಸುದ್ದಿ ನಿರ್ಬಂಧ ಆದೇಶ ತಪ್ಪು: ಶಹಾಪುರಕ್ಕೆ ಬರುತ್ತೇನೆಂದ ಸಿದ್ದಲಿಂಗಶ್ರೀ

ನಿರ್ಬಂಧ ಆದೇಶ ತಪ್ಪು: ಶಹಾಪುರಕ್ಕೆ ಬರುತ್ತೇನೆಂದ ಸಿದ್ದಲಿಂಗಶ್ರೀ

0
145

ಯಾದಗಿರಿ: ಸಿದ್ದಲಿಂಗಯ್ಯ ತಂದೆ ಶರಣಯ್ಯ ಗದ್ದುಗೆ ಹಿರೇಮಠ ನಾನಲ್ಲ, ನಾಳೆ ನಡೆಯುವ ಶಹಾಪುರ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ನಾನು ಬರುತ್ತೇನೆ ಎಂದು ಸಿದ್ದಲಿಂಗಶ್ರೀ ಹೇಳಿದ್ದಾರೆ.
ಯಾದಗಿರಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶದಲ್ಲಿ ನನ್ನ ಹೆಸರು ಇಲ್ಲ. ಹೀಗಾಗಿ ನಾಳೆ ನಡೆಯುವ ಕಾರ್ಯಕ್ರಮಕ್ಕೆ ನಾನು ಬರುವೆ ಕಾರ್ಯಕ್ರಮಕ್ಕೆ ಭದ್ರತೆ ನೀಡಿ ಎಂದು ಪೊಲೀಸರಿಗೆ ಸಿದ್ದಲಿಂಗಶ್ರೀ ಹೇಳಿದ್ದಾರೆ.
ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಪ್ರತಿ ಕೊಡಲು ಬಂದಿದ್ದ ಪೊಲೀಸರಿಗೆ ಅಕ್ಕಿ ಕಳ್ಳರ ಜತೆ ನಿಂತು ಫೋಟೋ ತೆಗೆಸಿಕೊಳ್ಳುತ್ತೀರಿ, ನಮ್ಮ ಮಾಹಿತಿ ಇಲ್ವಾ? ಎಂದು ಪ್ರಶ್ನಿಸಿದ್ದಾರೆ. ನೋಟಿಸ್ ನಿರಾಕರಿಸಿ ಪೊಲೀಸ್ ಅಧಿಕಾರಿಗೆ ಹೋಗಿಬನ್ನಿ ಎಂದು ಹೇಳಿದ್ದಾರೆ. ಇದರಿಂದಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೊರಡಿಸಿದ ಆದೇಶದಿಂದ ಮುಜುಗರಕ್ಕೀಡಾಗಿದೆ.

Previous articleಜೈಲಲ್ಲಿ ನಡತೆ ಬದಲಿಸಿಕೊಂಡ ದರ್ಶನ್
Next articleದಸರಾ ಪ್ರಯುಕ್ತ ವಿಶೇಷ ವ್ಯವಸ್ಥೆ: 34 ರೈಲುಗಳಿಗೆ ಹೆಚ್ಚುವರಿ ಬೋಗಿ