ಮೈಸೂರು: ನಾವು ಎಂದಿಗೂ ನಿಮಗೆ ಸುಳ್ಳು ಹೇಳುವುದಿಲ್ಲ. ನಮ್ಮ ಕೈಯಲ್ಲಿ ಆಗುವುದಾದರೇ ಮಾತ್ರ ಹೇಳುತ್ತೇವೆ ಮತ್ತು ಆ ಕೆಲಸವನ್ನು ಮಾಡುತ್ತೇವೆ. ಕೈಯಲ್ಲಿ ಆಗದಿದ್ದರೆ ನೇರವಾಗಿಯೇ ಆಗಲ್ಲ ಎಂದು ಹೇಳುತ್ತೇವೆ ಹೊರತು ಸುಳ್ಳು ಆಶ್ವಾಸನೆ ನೀಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಗೃಹಲಕ್ಷ್ಮೀ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಏನ್ ಹೇಳುತ್ತಾರೋ ಅದನ್ನು ಮಾಡುತ್ತಾರೆ. ನುಡಿದಂತೆ ಕಾಂಗ್ರೆಸ್ ನಾಯಕರು ನಡೆಯುತ್ತಾರೆ. ಚುನಾವಣೆ ಮೊದಲು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿತ್ತು. ಅದರಂತೆ ಪ್ರತಿ ತಿಂಗಳು ಇನ್ನು ಮುಂದೆ ಎಲ್ಲಾ ಮಹಿಳೆಯರ ಅಕೌಂಟ್‍ಗೆ 2 ಸಾವಿರ ಹಣ ಬರುತ್ತದೆ. ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅನುಷ್ಠಾನ ಮಾಡಿದ್ದೇವೆ ಎಂದರು.