ವಾಡಿ: ಚಿತ್ತಾಪುರ ಮೀಸಲು ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಪರ ಚುನಾವಣೆ ಪ್ರಚಾರ ಕೈಗೊಳ್ಳಲು ಪಟ್ಟಣಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಆಗಮಿಸಲಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಚುನಾವಣಾ ಉಸ್ತುವಾರಿ ಮುಕುಂದ ದೇಶ್ಪಾಂಡೆ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಕರೆಯಲಾದ ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು. ವಾಡಿ ಪಟ್ಟಣದ ಬಳಿರಾಮಚೌಕ್ ಹೊರ ವಲಯದಲ್ಲಿ ಏ.30ರಂದು ರವಿವಾರ ಮಧ್ಯಾಹ್ನ 3.ಗಂಟೆಗೆ ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿದ್ದು, ಮಣಿಕಂಠ ರಾಠೋಡ್ ಪರ ಮತಯಾಚನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 25. ಸಾವಿರ ಜನಸಂಖ್ಯೆ ಭಾಗಿಯಾಗುವ ನಿರೀಕ್ಷೆ ಇದೆ. ಜಿಲ್ಲೆಯ ವರಿಷ್ಠರು, ಹಾಗೂ ಯೋಗಿ ಅಭಿಮಾನಿಗಳು ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.
ಜಾರ್ಖಂಡ್ ರಾಜ್ಯಸಭಾ ಸದಸ್ಯ ಆದಿತ್ಯ ಪ್ರಸಾದ್ ಸಾಹು ಮಾತನಾಡಿ, ಯೋಗಿ ಆದಿತ್ಯನಾಥ ಅವರು ವಾಡಿ ಪಟ್ಟಣಕ್ಕೆ ಆಗಮಿಸುತ್ತಿರುವುದು ಇಲ್ಲಿನ ಜನರ ಸೌಭಾಗ್ಯವಾಗಿದೆ. ಬೃಹತ್ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ ಮಾತನಾಡಲಿದ್ದು, ಕಾಂಗ್ರೆಸ್ ಸರ್ಕಾರದ ದುರಾಡಳಿತದ ಕುರಿತು ಅವರು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ನೀಲಕಂಠರಾವ್ ಪಾಟೀಲ್, ಉಪಾಧ್ಯಕ್ಷ ವೀರಣ್ಣ ಯಾರಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವರಾಮ ಪವಾರ್, ಮುಖಂಡರಾದ ವಿಠ್ಠಲ್ ವಾಲ್ಮೀಕಿ ನಾಯಕ್, ಬಸವರಾಜ್ ಪಂಚಾಳ, ಪರ್ತಪ್ಪ ಕರದಳ್ಳಿ, ರಾಹುಲ್ ಸಿಂದಗಿ, ಅಶೋಕ್ ಸೂರ್ಯವಂಶಿ, ಈಶ್ವರ್ ರಾಠೋಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.