ಬಳ್ಳಾರಿ: ಸಂಡೂರು ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೂ ಮುನ್ನ ಕೋರ್ ಕಮಿಟಿ ಸಭೆ ನಡೆಸಲಾಯಿತು.
ಸಂಡೂರಿನಲ್ಲಿರುವ ವಿಲಾಸ್ ಪ್ಗಾಲೇಸ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ಮಾಜಿ ಸಚಿವರಾದ ಸುನೀಲ್, ಜನಾರ್ದನರೆಡ್ಡಿ, ಸೋಮಶೇಖರ ರೆಡ್ಡಿ, ಸಣ್ಣ ಫಕೀರಪ್ಪ, ಎಂಎಲ್ಸಿ ನವೀನ್, ಎನ್.ರವಿಕುಮಾರ್, ಶರಣಿ ತಳ್ಳಿಕೇರಿ ಹಲವು ನಾಯಕರು ಬಾಗಿಯಾಗಿದ್ದರು. ಸಂಡೂರು ಉಪಚುನಾವಣೆ ಪಕ್ಷದ ಪಾಲಿಗೆ ಪ್ರತಿಷ್ಟೆ ಕಣವಾಗಿದ್ದು ಎಲ್ಲರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು. ಯಾವುದೇ ಭಿನ್ನಾಭಿಪ್ರಾಯಗಳಿರಲಿ ಎಲ್ಲವನ್ನೂ ಬದಿಗೊತ್ತಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಹೈಕಮಾಂಡ್ ನಿರ್ಣಯದಂತೆ ಬಂಗಾರು ಹನುಮಂತು ಅವರಿಗೆ ಟಿಕೆಟ್ ನೀಡಲಾಗಿದೆ. ಎಲ್ಲರೂ ತನು ಮನು ಧನದಿಂದ ಚುನಾವಣೆಯಲ್ಲಿ ಶ್ರಮಿಸಬೇಕು ಎನ್ನುವ ಚರ್ಚೆಗಳು ಕೋರ್ ಕಮಿಟಿ ಸಭೆಯಲ್ಲಿ ಆದವು.