ನಾನು ಕಾಂಗ್ರೆಸ್ ಬಿಡುವುದಿಲ್ಲ

0
14

ಧಾರವಾಡ: ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಸಿಟ್ಟಿಲ್ಲ. ಸಿಟ್ಟಾಗುವಂಥದ್ದೇನೂ ಆಗಿಲ್ಲ. ನಾನು ಕಾಂಗ್ರೆಸ್ ಬಿಡುವುದಿಲ್ಲ. ಬಿಜೆಪಿಗೆ ಹೋಗಲು ಯಾವುದೇ ತೊಂದರೆಯಿಲ್ಲ; ಬಿಜೆಪಿಯ ಮುಖಂಡರು ನನ್ನನ್ನು ಕರೆಯುತ್ತಲೇ ಇದ್ದಾರೆ. ಆದರೆ, ಬಿಜೆಪಿ ಐಡಿಯಾಲಜಿ ನನಗೆ ಸರಿ ಹೊಂದುವುದಿಲ್ಲ. ಜೆಡಿಎಸ್‌ನವರೂ ಕರೆದಿದ್ದಾರೆ. ನಾನು ಐಡಿಯಾಲಜಿ ಇಟ್ಟುಕೊಂಡು ರಾಜಕೀಯ ಮಾಡುವವನು ಎಂದು ಎಂದು ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಳ್ಳೆಯ ಸಿಎಂ. ಸಿದ್ದರಾಮಯ್ಯ, ಆರ್.ವಿ. ದೇಶಪಾಂಡೆ ಹಾಗೂ ನಾನು ಏಕಕಾಲಕ್ಕೆ ರಾಜಕಾರಣಕ್ಕೆ ಬಂದವರು. ಸಚಿವ ಸ್ಥಾನ ಸಿಗದಿರುವುದಕ್ಕೆ ನನಗೆ ಯಾವುದೇ ಅಸಮಾಧಾನವಿಲ್ಲ. ಲಕ್ ಇದ್ದವರು ಮಂತ್ರಿಯಾಗ್ತಾರೆ. ಲಾಲಕೃಷ್ಣ ಅಡ್ವಾಣಿ ಪ್ರಧಾನಿಯಾಗಬೇಕಿತ್ತು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದರು. ಹಿರಿಯರು ಹಾಗೂ ಕಿರಿಯರು ಎಂಬ ಭೇದವಿಲ್ಲ ಎಂದು ರಾಯರೆಡ್ಡಿ ಉದಾಹರಣೆಗಳನ್ನು ನೀಡುವ ಮೂಲಕ ಪ್ರತಿಕ್ರಿಯಿಸಿದರು.

Previous articleಕನ್ನಡ ಭಾಷೆ ಹೊರಗಿಟ್ಟಿರುವುದು ಖಂಡನೀಯ
Next articleಶೆಟ್ಟರ್ ಬಕೆಟ್‌ ಹಿಡಿದು ಸಿಎಂ ಆಗಿದ್ರಾ?