‘ನವೀನ ಕಲ್ಪನೆ ಪ್ರಶಸ್ತಿ’ ವಿಭಾಗದಲ್ಲಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿಗೆ ಪ್ರಥಮ ಸ್ಥಾನ

0
6

ಹುಬ್ಬಳ್ಳಿ: ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನೀಡುವ ೨೦೨೨ನೇ ಸಾಲಿನ ‘ಅತ್ಯುತ್ತಮ ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿ’ ಪಟ್ಟಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ್ದು, ನಗರದ ರಾಜಕಾಲುವೆಯ ಗ್ರೀನ್ ಕಾರಿಡಾರ್ ಯೋಜನೆಗೆ ‘ನವೀನ ಕಲ್ಪನೆ ಪ್ರಶಸ್ತಿ’ ವಿಭಾಗದಲ್ಲಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿಗೆ ಪ್ರಥಮ ಸ್ಥಾನ ದೊರಕಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರದ ಸ್ಮಾರ್ಟ್ ಸಿಟಿ ದೇಶದ ಮಟ್ಟದಲ್ಲಿ ಹೊಸತನದಿಂದ ಕೂಡಿದ ಪರಿಕಲ್ಪನೆಗೆ ಮೊದಲ ಸ್ಥಾನ ಗಳಿಸಿ ಸಾಧನೆ ಮಾಡಿದೆ. ಸೂರತ್ ಎರಡನೇ ಸ್ಥಾನ, ರಾಯಪೂರ ಮೂರನೇ ಸ್ಥಾನಗಳಿಸಿವೆ. ಸೆ. ೭ರಂದು ಇಂದೋರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರುರ್ದೇಶ ಗಾಳಿ ಹಾಗೂ ಇತರರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಗರದ ೯ ಕಿ.ಮೀ. ರಾಜಕಾಲುವೆಯನ್ನು ಅಭಿವೃದ್ಧಿ ಪಡಿಸಲು, ಸ್ಮಾರ್ಟ್ಸಿಟಿ ಯೋಜನೆಯಡಿ ೨೧೦ ಕೋಟಿ ವೆಚ್ಚದ ಯೋಜನೆ ರೂಪಿಸಿ, ಮೊದಲ ಹಂತದಲ್ಲಿ ೫ ಕಿ.ಮೀ. ನಾಲಾ ಅಭಿವೃದ್ಧಿಪಡಿಸಿ ಗ್ರೀನ್ ಕಾರಿಡಾರ್ ಮಾಡಲಾಗಿದೆ. ಅದರ ಐದು ನಿಮಿಷದ ವಿಡಿಯೊ ಸಿದ್ಧಪಡಿಸಿ ಪಿಪಿಟಿ ಮೂಲಕ ಕೇಂದ್ರ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗಿತ್ತು. ದೇಶದ ೪೨ ಸ್ಮಾರ್ಟ್ಸಿಟಿಗಳಿಂದ ವಿವಿಧ ಯೋಜನೆಗಳಿಗೆ ಸಂಬಂಧಿಸಿ ೭೦ ಪ್ರಸ್ತಾವಗಳು ‘ನವೀನ ಕಲ್ಪನೆ ಪ್ರಶಸ್ತಿ’ ವಿಭಾಗಕ್ಕೆ ಹೋಗಿದ್ದವು. ವಿನೂತನ ಕಲ್ಪನೆಯಲ್ಲಿ ಕಾರ್ಯರೂಪಕ್ಕೆ ಬಂದ ನಮ್ಮ ರಾಜನಾಲಾ ಅಭಿವೃದ್ಧಿಯ ಗ್ರೀನ್ ಕಾರಿಡಾರ್ ಯೋಜನೆ ಮೊದಲ ಬಹುಮಾನಕ್ಕೆ ಪುರಸ್ಕೃತವಾಗಿದೆ’ ಎಂದು ಉಪಪ್ರಧಾನ ವ್ಯವಸ್ಥಾಪಕ ಹಾಗೂ ಗ್ರೀನ್ ಕಾರಿಡಾರ್ ಯೋಜನೆಯ ವ್ಯವಸ್ಥಾಪಕ ಚನ್ನಬಸವರಾಜ ತಿಳಿಸಿದ್ದಾರೆ.

Previous articleಆಗಸ್ಟ್ 23: ರಾಷ್ಟ್ರೀಯ ಬಾಹ್ಯಾಕಾಶ ದಿನ
Next articleನೀರು ನಿಲ್ಲಿಸಿದರೆ ಶಾಂತಿ ನೀರು ಬಿಟ್ಟರೆ ಕ್ರಾಂತಿ