ನವಲಗುಂದ: ಹೃದಯಾಘಾತದಿಂದ ವ್ಯಕ್ತಿ ಸಾವು

0
46

ನವಲಗುಂದ : ವಾಕಿಂಗ್ ಮುಗಿಸಿಕೊಂಡು ಬಂದು ಮನೆಯಲ್ಲಿ ಕುಳಿತಿದ್ದ ವ್ಯಕ್ತಿಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಪಟ್ಟಣದ ದೇಸಾಯಿ ಪೇಟೆ ಓಣಿಯಲ್ಲಿ ಸೋಮವಾರ ನಡೆದಿದೆ.

ಮೃತಪಟ್ಟ ವ್ಯಕ್ತಿ ನಾರಾಯಣ ಜಗನ್ನಾಥ ರಾಯ್ಕರ್ (53) ಎಂಬುವವರಾಗಿದ್ದಾರೆ.
ಜ್ಯುವೇಲರಿ ಶಾಪ್ ಮಾಲೀಕರಾಗಿದ್ದ ನಾರಾಯಣ ಅವರು ಆರ್ ಎಸ್ ಎಸ್ ಸಕ್ರಿಯ ಕಾರ್ಯಕರ್ತರಾಗಿದ್ದರು. ಸದಾ ಹಸನ್ಮುಖಿಗಳಾಗಿರುತ್ತಿದ್ದರು.

ಎಂದಿನಂತೆ ಸೋಮವಾರ ಬೆಳಿಗ್ಗೆ ವಾಕಿಂಗ್ ಗೆ ತೆರಳಿದ್ದರು.
ಈ ವೇಳೆ ತಮಗೆಕೋ ಎದೆ ಚುಚ್ಚಿದ ತರಹ ಆಗುತ್ತದೆ. ಮನೆಗೆ ಹೋಗುತ್ತೇನೆ. ನೀವು ವಾಕಿಂಗ್ ಮುಗಿಸಿ ಬನ್ರಿ ಎಂದು ವಾಕಿಂಗ್ ಸ್ನೇಹಿತರಿಗೆ ಹೇಳಿ ಮನೆಗೆ ಬಂದಿದ್ದರಂತೆ.

ಮನೆಯಲ್ಲಿ ಕುರ್ಚಿ ಮೇಲೆ ಕುಳಿತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಕುಟುಂಬದವರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಹೃದಯಘಾತದಿಂದ ಮೃತಪಟ್ಟಿರುವುದಾಗ ವೈದ್ಯರು ತಿಳಿಸಿದ್ದಾರೆ.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧುಗಳಿದ್ದಾರೆ.

Previous articleKantaraChapter-1: ಕಾಂತಾರಾ ಚಾಪ್ಟರ್-1 ಬಿಡುಗಡೆ ದಿನಾಂಕ ಘೋಷಣೆ
Next articleಅಮ್ರಿತಾ ವಿಜಯ್ ಟಾಟ ಮುಡಿಗೆ ಮಿಸೆಸ್ ಇಂಡಿಯಾ-2025 ಕಿರೀಟ