ಬೆಂಗಳೂರು: ನಮ್ಮ ಮೆಟ್ರೋ 8.26 ಲಕ್ಷಗಳ ಅತಿ ಹೆಚ್ಚು ಜನರು ಪ್ರಯಾಣಿಸಿದ ಹೊಸ ದಾಖಲೆಯಾಗಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಹಿಂದಿನ ರೈಡರ್‌ಶಿಪ್ ದಾಖಲೆಗಳನ್ನು ಮೀರಿಸಿ, ಮಂಗಳವಾರ ಆಗಸ್ಟ್, 6, 2024 ರಂದು ನಮ್ಮ ಮೆಟ್ರೋ 8.26 ಲಕ್ಷಗಳ ಅತಿ ಹೆಚ್ಚು ಜನರು ಪ್ರಯಾಣಿಸಿದ ಹೊಸ ದಾಖಲೆಯಾಗಿದೆ. ಒಟ್ಟಾರೆ ಮೆಟ್ರೋದಲ್ಲಿ 8,26,883 ಜನರು ಪ್ರಯಾಣಿಸಿದ್ದಾರೆ. ನಮ್ಮ ಮೆಟ್ರೋವನ್ನು ತಮ್ಮ ಪ್ರಯಾಣದ ಪಾಲುದಾರರನ್ನಾಗಿ ಮಾಡಿಕೊಂಡಿದ್ದಕ್ಕಾಗಿ ಮತ್ತು ವಾತಾವರ್ಣದ CO2 ಅನ್ನು ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವನ್ನು ಬೆಂಬಲಿಸುತ್ತಿರುವುದಕ್ಕಾಗಿ ಪ್ರಯಾಣಿಕರಿಗೆ ನಿಗಮದ ಧನ್ಯವಾದಗಳು ಎಂದಿದ್ದಾರೆ.