ಕಲಬುರಗಿ: ಅಫಜಲಪುರ ಕ್ಷೇತ್ರದ ಪಕ್ಷೇತರರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದ್ದು, ಚುನಾವಣಾ ಅಖಾಡದಿಂದ ಹಿಂದಕ್ಕೆ ಸರಿಯುವ ಮಾತೇ ಇಲ್ಲ. ನನ್ನ ಸಹೋದರ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಹಾಗೂ ಬಿಜೆಪಿ ನಾಯಕರು ಮನವೊಲಿಸಿದರೂ ನನ್ನ ನಿರ್ಧಾರ ಅಚಲವಾಗಿದೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ನಿತಿನ್ ಗುತ್ತೇದಾರ ಸ್ಪಷ್ಟ ಪಡಿಸಿದರು.
ಭಾನುವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಹಿರಿಯರ ಮಧ್ಯೆ ಪ್ರಮಾಣ ಮಾಡಿ ಹೇಳಿ 2023 ರ ಚುನಾವಣೆಯಲ್ಲಿ ಉತ್ತರಾಧಿಕಾರಿಯಾಗಿ ಸ್ಪರ್ಧಿಸುವಂತೆ ಹೇಳಿದರು. ಆದರೆ ವರಸೆ ಬದಲಾಯಿಸಿ ಈಗ ಮತ್ತೆ ಮುಂದಿನ ಬಾರಿ ಚುನಾವಣೆ ಉತ್ತರಾಧಿಕಾರಿ ಅಂತ ಹೇಳುತ್ತಿದ್ದಾರೆ. ಕ್ಷೇತ್ರದ ಜನರೇ ನನ್ನ ಕುಟುಂಬಸ್ಥರಾಗಿದ್ದಾರೆ. ಕುಟುಂಬದ ಉಳಿದ ಎಲ್ಲ ಸದಸ್ಯರು ಬೆಂಬಲಕ್ಕೆ ನಿಂತಿದ್ದಾರೆ ಎಂದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಗೆ ಶ್ರಮಿಸುವೆ. ಎಲ್ಲದ್ದಕ್ಕೂ ಮೇ 13ರಂದು ಉತ್ತರವೇ ಸಿಗಲಿದೆ. ಇದರಲ್ಲಿ ಜಯ ನನ್ನದೆ ಗೆಲುವು ಎಂದು ವಿಶ್ವಾಸ ವ್ಯಕ್ತಪಡಿಸಿದರು.
























