ನಡೆದಾಡುವ ದೇವರ ದರ್ಶನಕ್ಕೆ ಭಕ್ತರ ಮಹಾಪೂರ

0
42

ವಿಜಯಪುರ: ಮಹಾನ್ ಅನುಭಾವಿ, ಸಹಸ್ರಮಾನದ ಸಂತ, ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಭಕ್ತಾದಿಗಳ ಮಹಾಪೂರವೇ ಹರಿದುಬಂದಿದೆ. ಪ್ರತಿಯೊಬ್ಬ ಭಕ್ತರಿಗೂ ಅವರ ದರ್ಶನಾಶೀರ್ವಾದವಾಗಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಸಮರ್ಪಕ ವ್ಯವಸ್ಥೆ ಕೈಗೊಂಡಿತು.
ಲಕ್ಷಾಂತರ ಭಕ್ತಾದಿಗಳು ಒಂದೆಡೆ ಸೇರಿದರೆ ದರ್ಶನ ಕಷ್ಟ ಎಂದರಿತ ಜಿಲ್ಲಾಡಳಿತ, ಅಧಿಕಾರಿಗಳು ವ್ಯವಸ್ಥಿತವಾದ ಕಾರ್ಯಯೋಜನೆ ಸಿದ್ಧಪಡಿಸಿ ಪ್ರತಿಯೊಬ್ಬರಿಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪಾರ್ಥಿವ ಶರೀರದ ದರ್ಶನವಾಗುವಂತೆ ಅಚ್ಚುಕಟ್ಟುತನದಿಂದ ನಿರ್ವಹಿಸಿದರು.
ವಿಜಯಪುರದ ಸೈನಿಕ ಶಾಲೆಯ ಆವರಣಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆದುಕೊಳ್ಳುವ ವ್ಯವಸ್ಥೆ ಪಡೆದುಕೊಳ್ಳಲಾಗಿತ್ತು. ಮುಖ್ಯ ಪ್ರವೇಶದ್ವಾರದಿಂದ ಜನರನ್ನು ಒಳಪ್ರವೇಶಿಸುವ ಹಾಗೂ ಇನ್ನೊಂದು ನಿರ್ಗಮನ ಹಾಗೂ ಇನ್ನೊಂದು ಅತೀ ಗಣ್ಯರು ಪ್ರವೇಶದ್ವಾರ ನಿರ್ಮಿಸಲಾಗಿತ್ತು.

Previous articleಜನವರಿ ಕೊನೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧ: ಸಿದ್ದರಾಮಯ್ಯ
Next articleನಾಟಕದಲ್ಲೊಂದು ನಾಟಕಕ್ಕೆ ಕಂಬಾರ ವಿಷಾದ