ನಗರಸಭೆ ಸಿಬ್ಬಂದಿ ಮೇಲೆ ಹಲ್ಲೆ ಆರೋಪ

0
15

ಇಳಕಲ್ : ನಗರಸಭೆಯ ಸಿಬ್ಬಂದಿ ಓರ್ವನ ಮೇಲೆ ನಗರಸಭೆಯ ಹಿರಿಯ ಅಧಿಕಾರಿಗಳೇ ಹಲ್ಲೆ ಮಾಡಿದ್ದಾರೆ ಎಂಬ ದೂರನ್ನು ಶಹರ್ ಪೋಲಿಸ್ ಠಾಣೆಯಲ್ಲಿ ನೀಡಲಾಗಿದೆ. ನಗರಸಭೆಯಲ್ಲಿ ಬಿಲ್ ಸಂಗ್ರಹಕಾರನಾಗಿ ಕಾರ್ಯ ಮಾಡುತ್ತಿರುವ ವಿಕಲಚೇತನ ಯಮನೂರ ಗುಡಿಹಿಂದಿನ ಎಂಬುವರರನ್ನು ಕಂದಾಯ ಅಧಿಕಾರಿ ಪ್ರಸಾದ ಮತ್ತು ಕಂದಾಯ ನೀರಿಕ್ಷಿಕ ಸಾಯಿಬಣ್ಣ ಸೇರಿಕೊಂಡು ಮೂರ್ಚೆ ಬರುವಂತೆ ಹೊಡೆಯುವ ಜೊತೆಗೆ ಅಂಗವಿಕಲ ಎಂದು ಹೀಯಾಳಿಸಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಯಮನೂರ ಇತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ ಪೋಲಿಸರು ವಿಚಾರಣೆಯನ್ನು ನಡೆಸಿದ್ದಾರೆ ಕಚೇರಿಯ ಕೆಲಸದಲ್ಲಿನ ವಿಷಯದ ಮೇಲೆಯೇ ಈ ಮೂವರಲ್ಲಿ ಭಿನ್ನಾಭಿಪ್ರಾಯ ಬಂದು ಈ ಜಗಳ ನಡೆದಿದೆ ಎಂದು ತಿಳಿದು ಬಂದಿದೆ

Previous articleಮತ್ತೆ ಕಾರ್ಯಾರಂಭಗೊಂಡ ಮಹಿಷವಾಡಗಿ ಸೇತುವೆ..!
Next articleವಿಜಯಪುರ-ಮಂಗಳೂರು ರೈಲುಗಳು ಭಾಗಶಃ ರದ್ದು