ಗದಗ: ಮುಳಗುಂದ ಪಟ್ಟಣದ ಹಿರಿಯರು, ದೊಡ್ಡಾಟ, ಭಜನಾ ಕಲಾವಿದ, ವೇದಮೂರ್ತಿಗಳಾದ ಚಂದ್ರಶೇಖರಯ್ಯ ಮರಿದೇವಯ್ಯ ಮರಿದೇವರಮಠ(94) ನಿಧನರಾದರು.
ಮೂಡಲಪಾಯ ದೊಡ್ಡಾಟ, ಸಣ್ಣಾಟದ ಕಥೆಗಾರರಾಗಿ ಶರಣರ ವಚನಗಳು, ದಾಸರ ತತ್ವಪದಗಳ ಭಜನೆಯ ಹಾರ್ಮೋನಿಯಂ ಮಾಸ್ತರರಾಗಿ ತಮ್ಮ ಇಳಿವಯಸ್ಸಿನಲ್ಲಿಯೂ ಹಾಡು ಹಾಡುವ ಮೂಲಕ ರಂಗಭೂಮಿ, ಸಂಗೀತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಮೃತರ ಅಂತ್ಯಕ್ರಿಯೆ ಜುಲೈ 20ರಂದು ಬೆಳಗ್ಗೆ 11ಗಂಟೆಗೆ ಜರುಗಲಿದೆ.