ದೆಹಲಿ: ಭಾರತದಾದ್ಯಂತ 1,000 ಖೇಲೋ ಇಂಡಿಯಾ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖೇಲೋ ಇಂಡಿಯಾ ಕೇಂದ್ರಗಳಿಂದಾಗಿ ಆಟಗಾರರ ಮತ್ತು ಆಟದ ಸುಧಾರಣೆಗಾಗಿ ಬದಲಾವಣೆಗಳನ್ನು ಮಾಡಬಹುದು. ಜತೆಗೆ ಪೋರ್ಟಲ್ ಕೂಡ ಪ್ರಾರಂಭಿಸಿದ್ದು ಅದನ್ನು ಕ್ರೀಡಾಪಟುಗಳು, ತರಬೇತುದಾರರು ಮತ್ತು ಫೆಡರೇಶನ್ ಬಳಸಬಹುದಾಗಿದೆ ಎಂದರು.