ದೇವೇಗೌಡರನ್ನು ಆಮಂತ್ರಿಸಿಲ್ಲ ಎಂಬುದು ಸುಳ್ಳು: ಕೇಂದ್ರ ಸಚಿವ ಜೋಶಿ

0
12
ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಆಮಂತ್ರಿಸಿಲ್ಲ ಎಂಬುದು ಸುಳ್ಳು ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವೇಗೌಡರಿಗೆ ಕರೆ ಮಾಡಿದ್ದಾರೆ. ಆದರೂ ಅವರು ಬಂದಿಲ್ಲ. ಯಾಕೆ ಬಂದಿಲ್ಲ ಎಂಬುದು ನಮಗೆ ಗೊತ್ತಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಕುಟುಂಬ ಸರ್ಕಾರದ ಹಲವು ಉನ್ನತ ಹುದ್ದೆಯಲ್ಲಿದ್ದರೂ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿರಲಿಲ್ಲ. ಯಾವುದೇ ರೀತಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದರು.

Previous articleಉಕ್ರೇನ್ ಕುಟುಂಬದಿಂದ ಕೊರಗಜ್ಜನಿಗೆ ಅಗೇಲು ಸೇವೆ
Next articleಶಸ್ತ್ರಾಸ್ತ್ರ ರಫ್ತು-ಭಾರತ ಶೀಘ್ರ ಮುಂಚೂಣಿಗೆ