ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕ

0
18

ಹಾವೇರಿ: ರಾಣೆಬೇನ್ನೂರ ತಾಲೂಕಿನ ದೇವರಗುಡ್ಡ ಮಾಲತೇಶ ಸ್ವಾಮಿಯ ದಸರಾ ಕಾರಣಿಕ “ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್” ಎಂದು ನುಡಿಯಲಾಗಿದೆ. ಪ್ರತಿ ವರ್ಷ ದಸರಾ ಹಬ್ಬದ ಆಯುಧ ಪೂಜೆಯಂದು ಕಾರ್ಣಿಕ ನುಡಿಯಲಾಗುತ್ತದೆ. ಒಂಬತ್ತು ದಿನ ಉಪವಾಸವಿದ್ದು ಗೊರವಯ್ಯಾ ಕಾರ್ಣಿಕ ನುಡಿಯುತ್ತಾರೆ. ಬಿಲ್ಲನ್ನೇರಿ ಪ್ರಸಕ್ತ ವರ್ಷದ ಕಾರ್ಣಿಕವನ್ನು ಗೊರವಪ್ಪ ನುಡಿದಿದ್ದಾರೆ. ರೈತರಿಗೆ ಲಾಭವಾಗುವ ನಿರೀಕ್ಷೆಗಳು ಕಡಿಮೆ, ರಾಜ್ಯ ರಾಜಕೀಯ ಏರುಪೇರಾಗುವ ಸಾಧ್ಯತೆ ಎಂದು ವಿಶ್ಲೇಷಣೆ ಮಾಡಿದ್ದಾರೆ. ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿ ಆಗಿದ್ದರು.

Previous articleಬಿಜೆಪಿ ಟಿಕೆಟ್ ವಂಚನೆ ಮತ್ತೊಂದು ಪ್ರಕರಣ
Next articleಅಂಬಾರಿ ಬಸ್ ನಲ್ಲಿ ಕುಳಿತು ದೀಪಾಲಂಕಾರ ವೀಕ್ಷಿಸಿದ ಸಿಎಂ