ದೆಹಲಿ ಮಹಿಳಾ ಆಯೋಗದ 223 ನೌಕರರನ್ನು ವಜಾಗೊಳಿಸಿದ ಲೆಫ್ಟಿನೆಂಟ್ ಗವರ್ನರ್

0
10

ದೆಹಲಿ: ದಿಲ್ಲಿ ಮಹಿಳಾ ಆಯೋಗಕ್ಕೆ ಅನುಮತಿ ಇಲ್ಲದೆ ಅಕ್ರಮವಾಗಿ ಸಿಬ್ಬಂದಿ ನೇಮಕಾತಿ ಮಾಡಲಾಗಿದೆ ಎಂದು 223 ನೌಕರರನ್ನು ವಜಾಗೊಳಿಸಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಆದೇಶ ಹೊರಡಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಳಿವಾಲ್ ಅವರು ದಿಲ್ಲಿ ಮಹಿಳಾ ಆಯೋಗದ ತಮ್ಮ ಅಧ್ಯಕ್ಷಗಿರಿ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿಗಳನ್ನು ನಡೆಸಿದ್ದರು ಎಂದು ಆರೋಪಿಸಲಾಗಿದೆ. ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲ್ಯೂ) ಕಾಯ್ದೆ ಅಡಿಯಲ್ಲಿ ಕೇವಲ 40 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಹೆಚ್ಚುವರಿ ಸದಸ್ಯರ ನೇಮಕಾತಿಗೆ ಯಾವುದೇ ಅನುಮೋದನೆ ಪಡೆದುಕೊಂಡಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಹೊರಡಿಸಿರುವ ಆದೇಶ ಹೇಳಿದೆ.

Previous articleಹಣ, ಅಧಿಕಾರ ಮೇಳೈಸಿದೊಡೆ ಇಂಥ ಹನನವೇ?
Next articleನಿಮ್ಮ ದುಷ್ಟ ಕಣ್ಣು ಆಯೋಗದ ಮೇಲೆ ಬಿದ್ದಿತೆ: ಸ್ವಾತಿ