ದುಬಾರಿ ಫೋನ್ ಖರೀದಿಸಿದ್ದಕ್ಕೆ ತಂದೆ ಬುದ್ಧಿವಾದ: ಪುತ್ರ ಆತ್ಮಹತ್ಯೆ

0
27

ಬೆಳಗಾವಿ: ದುಬಾರಿ ಬೆಲೆಯ ಐಫೋನ್‌ನ್ನು ಸಾಲ ಮಾಡಿ ಖರೀದಿಸಿದ್ದಕ್ಕೆ ಮಗನನ್ನು ತಂದೆ ಬೈದದ್ದಕ್ಕೆ ಕೋಪ ಮಾಡಿಕೊಂಡ ಮಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ್ಯೂ ವೈಭವ ನಗರದಲ್ಲಿ ನಿನ್ನೆ ಸಂಜೆ ನಡೆದಿದೆ.
ಮೃತ ಯುವಕನನ್ನು ಮುಸ್ತಫೀಸ್ ಅಬ್ದುಲ್ ರಶೀದ್ ಶೇಖ್(24) ಎಂದು ಗುರುತಿಸಲಾಗಿದೆ. 70 ಸಾವಿರ ಬೆಲೆಯ ದುಬಾರಿ ಐಫೋನನ್ನು ನಿನ್ನೆ ಇಎಂಐ ಸಾಲದ ಮೂಲಕ ಖರೀದಿ ಮಾಡಿದ್ದಾನೆ. ಹಣಕಾಸಿನ ಅಡಚಣೆಯಲ್ಲಿರುವಾಗ ಇಷ್ಟೊಂದು ದುಬಾರಿ ಫೋನ್ ಖರೀದಿ ಮಾಡಿದ್ದು ಯಾಕೆ? ಕಡಿಮೆ ಬೆಲೆಯ ಫೋನ್ ಖರೀದಿ ಮಾಡಿದರೆ ಸಾಕಿತ್ತು ಎಂದು ಮುಸ್ತಫೀಸ್ ತಂದೆ ಮಗನಿಗೆ ಬೈದು ಬುದ್ಧವಾದ ಹೇಳಿದ್ದಾರೆ.
ಅಷ್ಟಕ್ಕೇ ಮನನೊಂದ ಆತ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಖಾನಾಪುರದಲ್ಲಿ ಚೋರರ ಕೈ ಚಳಕ: ಹಾಡುಹಗಲೇ ಮನೆಕಳವು
Next articleಏ. 9ರವರೆಗೂ ಬೇಸಿಗೆ ಮಳೆ