Home Advertisement
Home ತಾಜಾ ಸುದ್ದಿ ದಾವಣಗೆರೆಯ ದಂಪತಿ ಅಮೇರಿಕಾದಲ್ಲಿ ಅನುಮಾನಸ್ಪದ ಸಾವು!

ದಾವಣಗೆರೆಯ ದಂಪತಿ ಅಮೇರಿಕಾದಲ್ಲಿ ಅನುಮಾನಸ್ಪದ ಸಾವು!

0
102

ದಾವಣಗೆರೆ: ದಾವಣಗೆರೆ ಮೂಲದ ಮೂವರು ಅಮೇರಿಕಾದಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡಿರುವ ಘಟನೆ ಶನಿವಾರ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೆಕಲ್ಲು ಗ್ರಾಮದ ಮೂಲದವರಾದ ಒಂದೇ ಕುಟುಂಬದ ಯೋಗೇಶ್ ಹೊನ್ನಾಳ(37), ಪ್ರತಿಭಾ ಹೊನ್ನಾಳ(35), ಯಶ್ ಹೊನ್ನಾಳ(6) ಅನುಮಾನಸ್ಪದವಾಗಿ ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ಸಾವುಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ದ ಯೋಗೇಶ್ ಮತ್ತು ಪ್ರತಿಭಾ ಮದುವೆ ನಂತರ ಅಮೇರಿಕಾದಲ್ಲಿ ಮಗುವಿನೊಂದಿಗೆ ವಾಸವಿದ್ದರು. ಮೃತ, ಪತಿ ಪತ್ನಿ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರಾಗಿ ಸೇವೆ ಸಲ್ಲಿಸುತ್ತಿದ್ದರು‌, ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಮೂವರ ಸಾವು ಹಲವು ಅನುಮಾನಗಳು ಹುಟ್ಟಿಹಾಕಿದ್ದು, ಸಾವಿನ ನಿಖರ ಕಾರಣ ತಿಳಿಸುವಂತೆ ಹಾಗೂ ಮೃತ ದೇಹಗಳನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ದಾವಣಗೆರೆಯಲ್ಲಿ ವಾಸವಿರುವ ಯೋಗೇಶ್ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರು ಮೃತ ಯೋಗೇಶ್ ತಾಯಿ ಶೋಭಾ, ಮಗ ಮತ್ತು ಸೊಸೆ ಸುಖ ಜೀವನವನ್ನೇ ನಡೆಸುತ್ತಿದ್ದರು. ಒಂಭತ್ತು ವರ್ಷದಿಂದ ಅಮೇರಿಕಾದಲ್ಲಿಯೇ ವಾಸವಾಗಿದ್ದರು. ಯಾಕೆ ಈ ರೀತಿ ಸಾವು ಕಂಡರು ಎಂಬುದು ತಿಳಿಯುತ್ತಿಲ್ಲ. ಸರ್ಕಾರ ಕೂಡಲೇ ನೆರವಿಗೆ ಧಾವಿಸಿ ಮೃತ ಪುತ್ರ, ಸೊಸೆ ಮತ್ತು ಮೊಮ್ಮಗನ ಸಾವಿಗೆ ನಿಖರ ಕಾರಣ ತಿಳಿಸಲು ಹಾಗೂ ಮೃತ ದೇಹಗಳನ್ನು ಸ್ವದೇಶಕ್ಕೆ ಮರಳಿಸಲು ಕಣ್ಣೀರಿಡುವ ಮೂಲಕ ಒತ್ತಾಯಿಸಿದರು.

Previous articleಬಿಜೆಪಿ ಬಿಟ್ಟವರು ಮೋದಿಗಾಗಿ ವಾಪಸ್ ಬನ್ನಿ
Next articleವಿಧಾನ ಪರಿಷತ್‌ ಸ್ಥಾನಕ್ಕೆ ಉಮಾಶ್ರೀ, ಸೀತಾರಾಮ್, ಸುಧಾಮ್ ದಾಸ್ ಹೆಸರಿಗೆ ಅನುಮೋದನೆ