ದಾಖಲೆ ಇಲ್ಲದ 66 ಕೆಜಿ ಬೆಳ್ಳಿ ಸಾಮಾನು ಪತ್ತೆ

0
20
ಬೆಳ್ಳಿ

ದಾವಣಗೆರೆ: ಚುನಾವಣೆ ಹೊತ್ತಲ್ಲೆ ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ ಬಳಿ ದಾಖಲೆ ಇಲ್ಲದ 39 ಲಕ್ಷ ರೂ., ಮೌಲ್ಯದ 66 ಕೆಜಿಯ ಬೆಳ್ಳಿ ಸಾಮಾನುಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡ ಘಟನೆ ಶುಕ್ರವಾರ ನಡೆದಿದೆ.
ಬಿಎಂ ಡಬ್ಲ್ಯೂ ಕಾರಿನಲ್ಲಿ ದಾಖಲೆ ಇಲ್ಲದೆ ಬೆಳ್ಳಿ ಸಾಗಿಸುತ್ತಿರುವುದಕ್ಕೆ ಅನುಮಾನಗೊಂಡ ತಾಲ್ಲೂಕು ಚುನಾವಣೆ ಅಧಿಕಾರಿ, ತಹಶೀಲ್ದಾರ್ ಡಾ. ಅಶ್ವಥ್ ತಪಾಸಣೆ ನಡೆಸಿದಾಗ ಬೆಳ್ಳಿ ಪತ್ತೆಯಾಗಿದ್ದು, ಕೂಡಲೇ ಅದನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Previous articleಮಹಾಲಿಂಗೇಶ್ವನ ಮೊರೆ ಹೋದ ಪುತ್ತೂರು ಶಾಸಕರು
Next articleRR ನಗರ ಕೈ ಅಭ್ಯರ್ಥಿ ಕುಸುಮಾ, ಡಿಕೆ ಸುರೇಶ್‌ ವಿರುದ್ಧ FIR