ಬಾಗಲಕೋಟೆ: ಉಗಲವಾಟ ಗ್ರಾಮದಲ್ಲಿ ದಲಿತ ಯುವಕನ ಥಳಿರ ಪ್ರಕರಣದಲ್ಲಿ ಈವರೆಗೆ ೬ ಜನರನ್ನು ಬಂಧಿಸಲಾಗಿದೆ. ಘಟನೆ ಸತ್ಯಾಸತ್ಯತೆ ತಿಳಿದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ಜಿಲ್ಲಾಡಳಿತ ಭವನ ಆವರಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗಲವಾಟ ಪ್ರಕರಣದಲ್ಲಿ ನಿಜಯವಾಗಿಯೂ ಅನ್ಯಾಯವಾಗಿದ್ದರೆ ಶಿಕ್ಷೆ ಕೊಡಿಸುವ ಕೆಲಸವಾಗುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವು ಘಟನೆಗಳು ನಡೆಯುತ್ತವೆ. ಬೇರೆ, ಬೇರೆ ಕಾರಣಕ್ಕೆ ಇಂಥ ಕೃತ್ಯ ನಡೆದಿರುತ್ತದೆ ಸತ್ಯಾಸತ್ಯತೆ ತಿಳಿಯುವ ಕೆಲಸವಾಗಬೇಕಿದೆ ಎಂದರು.