ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದಲ್ಲಿ ದರೋಡೆಕೋರರಿಬ್ಬರಿಗೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿದ್ದು, ಇಬ್ಬರನ್ನು ಚಿಕಿತ್ಸೆಗಾಗಿ ಕೆಎಂಸಿಆರ್ ಐಗೆ ದಾಖಲಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಕಳ್ಳರಿಬ್ಬರ ಮೇಲೆ ಪೊಲೀಸರ ಫೈರಿಂಗ್ ಮಾಡಲಾಗಿದೆ.
ಉಪನಗರ ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ರಾಯನಾಳದ ಮನೆಯೊಂದರಲ್ಲಿ ಕಳವು ಮಾಡಿ ಹೋಗುವ ವೇಳೆ ಗುಡಿಹಾಳ ಬಳಿ ಫೈರಿಂಗ್ ಮಾಡಲಾಗಿದೆ. ಉಪನಗರ ಠಾಣೆ ಇನ್ಸಪೆಕ್ಟರ್ ಎಂ.ಎಸ್. ಹೂಗಾರ ನೇತೃತ್ವದ ತಂಡ ಫೈರಿಂಗ್ ಮಾಡಿ ಆರೋಪಿಗಳನ್ನು ಬಂಧಿಸಿದೆ.