ದತ್ತಮಾಲಾಧಾರಿಗಳಿಂದ ಪಡಿಸಂಗ್ರಹ

0
18

ಚಿಕ್ಕಮಗಳೂರು: ದತ್ತಜಯಂತಿ ‌ಅಂಗವಾಗಿ ದತ್ತಮಾಲಾಧಾರಿಗಳು ಸೋಮವಾರ ನಗರದಲ್ಲಿ ಪಡಿಸಂಗ್ರಹ (ಭಿಕ್ಷಾಟನೆ) ಮಾಡಿದರು.

ಮಾಜಿ ಶಾಸಕ ಸಿ.ಟಿ.ರವಿಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಸೇರಿದಂತೆ ಹಲವು ಮಾಲಾಧಾರಿಗಳು ಸಾಥ್ ನೀಡಿದರು.

ನಗರದ ನಾರಾಯಣಪುರ ಬಡಾವಣೆ ಸೋಮವಾರ ಬೆಳಿಗ್ಗೆ ತೆರಳಿದ 20ಕ್ಕೂ ಹೆಚ್ಚು ದತ್ತ ಮಾಲಾಧಾರಿಗಳು ಬಡಾವಣೆಯಲ್ಲಿ 9 ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದರು.

ದತ್ತಮಾಲಾಧಾರಿಗಳು ಮನೆಗೆ ಆಗಮಿಸುತ್ತಿದ್ದಂತೆ ಮನೆಯ ಒಡತಿಯರು ದತ್ತಮಾಲಾಧಾರಿಗಳ ಪಾದ ತೊಳೆದು, ಅಕ್ಕಿ, ಬೆಲ್ಲ ಸೇರಿದಂತೆ ಇತರೆ ಪದಾರ್ಥಗಳನ್ನು ನೀಡಿದರು.

ಮಂಗಳವಾರ ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಮತ್ತು ಹೋಮ ಹವನಗಳು ಜರುಗಲಿದ್ದು, ಈ ವೇಳೆ ಸಂಗ್ರಹಿಸಿದ ಪಡಿಯನ್ನು ದೇವರಿಗೆ ಅರ್ಪಿಸಲಾಗುವುದು.

ಸೋಮವಾರ ಮಧ್ಯಾಹ್ನ ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ ಆರಂಭಗೊಂಡು ನಗರ ಆಜಾದ್ ಪಾರ್ಕ್ ವೃತ್ತ ತಲುಪಲಿದೆ. ಅಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವರು.

Previous articleದತ್ತಮಾಲಾಧಾರಿಗಳಿಂದ ಪಡಿಸಂಗ್ರಹ
Next articleನಾಮಫಲಕದಲ್ಲಿ ಕನ್ನಡ ಬಳಕೆ ಕಡ್ಡಾಯ