ತುಷ್ಟೀಕರಣ ರಾಜಕಾರಣ ಮುಚ್ಚಿಕೊಳ್ಳಲು ಆರ್‌ಎಸ್‌ಎಸ್ ಬಗ್ಗೆ ಕಾಂಗ್ರೆಸ್ ಆರೋಪ

0
20
CM

ಹುಬ್ಬಳ್ಳಿ: ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಭಯೋತ್ಪಾದನೆ ಚಟುವಟಿಕೆಗಳು ಹಾಗೂ ತುಷ್ಟೀಕರಣದ ರಾಜಕಾರಣ ಮುಚ್ಚಿಕೊಳ್ಳಲು ರಾಹುಲ್ ಗಾಂಧಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಆಡಳಿತ ನಡೆಸುವ ಅವಧಿಯಲ್ಲಿ ದೇಶದ ಯಾವ್ಯಾವ ಭಾಗಗಳಲ್ಲಿ ಎಷ್ಟೆಷ್ಟು ದೊಡ್ಡ ಭಯೋತ್ಪಾದನೆ ಕೃತ್ಯಗಳು ನಡೆದಿವೆ ಎಂದು ಅವರೇ ಒಮ್ಮೆ ತಿರುಗಿ ನೋಡಲಿ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇಸ್ಲಾಂ ರಾಷ್ಟ್ರಗಳು ಸಹ ಪ್ರಧಾನಿ ಮೋದಿ ಅವರ ಯೋಜನೆ ಒಪ್ಪಿಕೊಳ್ಳುತ್ತಿವೆ. ಹೀಗಿದ್ದಾಗ ಆರ್‌ಎಸ್‌ಎಸ್ ಮತ್ತು ಬಿಜೆಪಿಯವರನ್ನು ಕೋಮು ಸೌಹಾರ್ದತೆ ಕದಡುವವರು ಎಂದು ಆರೋಪಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

Previous articleವರ್ಷದೊಳಗೆ ರಾಜ್ಯಕ್ಕೆ ಮಹದಾಯಿ ನೀರು: ಜೋಶಿ
Next articleಸಮುದ್ರದ ಆಳದಲ್ಲಿಯೂ ಗಂಧದಗುಡಿ ಪ್ರಚಾರ !