Home Advertisement
Home ತಾಜಾ ಸುದ್ದಿ ತುಮಕೂರಿಗೆ ಮೂರು ರೈಲ್ವೆ ಕಾಮಗಾರಿ ಮಂಜೂರು

ತುಮಕೂರಿಗೆ ಮೂರು ರೈಲ್ವೆ ಕಾಮಗಾರಿ ಮಂಜೂರು

0
95

ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿ ಮತ್ತೆ ಎರಡು ರಸ್ತೆ ಕೆಳ ಸೇತುವೆ ಹಾಗೂ ಒಂದು ರಸ್ತೆ ಮೇಲ್ಸೇತುವೆಯನ್ನು ರೈಲ್ವೆ ಇಲಾಖೆ ಮಂಜೂರು ಮಾಡಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಈ ಕಾಮಗಾರಿಗಳ ಮೊತ್ತ 60 ಕೋಟಿ. ರೂ. ಆಗಿದ್ದು ಕಾಮಗಾರಿಯ ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಕಲ್ಲಿಪಾಳ್ಯ ರೋಡ್ (ರಸ್ತೆ ಕೆಳ ಸೇತುವೆ 13.44 ಕೋಟಿ ರೂ.), ಬೆಂಚಗೆರೆ ಗೇಟ್ (ರಸ್ತೆ ಮೇಲ್ಸೇತುವೆ 36.62 ಕೋಟಿ ರೂ.), ಬಂಡಿಹಳ್ಳಿ ರೋಡ್ ಗೇಟ್ (ರಸ್ತೆ ಕೆಳ ಸೇತುವೆ 10.01 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದಿದ್ದಾರೆ.

Previous articleಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ​ ಯತ್ನಾಳ್​​ ಧರಣಿ
Next articleಬಳ್ಳಾರಿ ಜೈಲು ಸುತ್ತಲೂ ಬಿಗಿ ಭದ್ರತೆ