ತರುಣ್ – ಸೋನಲ್ ಕ್ರೈಸ್ತ ಸಂಪ್ರದಾಯದಂತೆ ಮದುವೆ

0
33

ಮಂಗಳೂರು: ನಿರ್ದೇಶಕ ತರುಣ್ ಸುಧೀರ್‌ರವರನ್ನು ಇತ್ತೀಚಿಗೆ ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿರುವ ಮಂಗಳೂರು ಮೂಲದ ನಟಿ ಸೋನಲ್ ಮೊಂತೆರೋ ಅವರು ಇದೀಗ ಮಂಗಳೂರಿನಲ್ಲಿ ಕ್ರೈಸ್ತ ಸಂಪ್ರದಾಯಂತೆ ಮದುವೆಯಾಗಿದ್ದಾರೆ.
ಮಂಗಳೂರಿನಲ್ಲಿರುವ ಸೋನಲ್‌ರವರ ಕುಟುಂಬಸ್ಥರು, ಬಂಧು, ಮಿತ್ರರ ಸಮ್ಮುಖದಲ್ಲಿ ಸೆ.೧ರಂದು ಕ್ರೈಸ್ತ ಸಂಪ್ರದಾಯದಂತೆ ನಗರದ ಕುಲಶೇಖರದ ಕೋರ್ಡೆಲ್ ಚರ್ಚ್‌ನಲ್ಲಿ ಉಂಗುರು ಬದಲಾಯಿಸಿಕೊಂಡಿದ್ದಾರೆ.
ಸೋನಲ್ ಅವರು ಬಿಳಿ ಬಣ್ಣದ ಲಾಂಗ್ ಗೌನ್, ತರುಣ್ ಸುಧೀರ್ ಬಿಳಿ ಸಟ್‌ನಲ್ಲಿದ್ದರು. ಚರ್ಚ್‌ನಲ್ಲಿ ಮದುವೆಯಾದ ಬಳಿಕ ಈ ಜೋಡಿ ಮಂಗಳೂರಿನಲ್ಲಿ ಖಾಸಗಿ ಹಾಲ್‌ನಲ್ಲಿ ಅದ್ದೂರಿ
ರೆಸೆಪ್ಷನ್ ಸಹ ಮಾಡಿಕೊಂಡಿದೆ. ಈ ರೆಸೆಪ್ಷನ್ನಲ್ಲಿಯೂ ತರುಣ್ ಸುಧೀರ್ ಅವರು ಬ್ರೌನ್ ಸೂಟ್ ಹಾಗೂ ನಟಿ ಸೋನಲ್ ಸೀರೆಯಲ್ಲಿ ಮಿಂಚಿದ್ದಾರೆ. ಚಿತ್ರರಂಗದ ನಟ, ನಟಿಯರು ಸೇರಿದಂತೆ ಆಹ್ವಾನಿತ ಗಣ್ಯರು ಆಗಮಿಸಿದ್ದರು.
ಮೂರು ದಿನಗಳ ಹಿಂದೆ ಮಂಗಳೂರಿನ ರೆಸಾರ್ಟ್‌ನಲ್ಲಿ ನಡೆದಿರುವ ರೋಸ್ ಸಮಾರಂಭ ಕುರಿತ ಚಿತ್ರದ ತುಣುಕನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

Previous articleಮಗು ಅಪಹರಣ: ಎರಡು ಗಂಟೆಯೊಳಗೆ ಪ್ರಕರಣ ಬೇಧಿಸಿದ ಪೊಲೀಸರು
Next articleಸಿ.ಎಸ್.ಆರ್ ಯೋಜನೆ ಪ್ರಕರಣ: ತನಿಖೆಗೆ ಆದೇಶಿಸಿದ ಆರೋಗ್ಯ ಸಚಿವರು